ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಿದರು ಹಾನಂತೆ ಹರಿ ಎಲ್ಲ ಜಗವ ತುಂಬಿಹನಂತೆ ಪ ಮಣ್ಣುಮುಳ್ಳು ಎಲ್ಲ ಬಿಡದೆ ಸೋಸಿಲಿನೋಡಲಲ್ಹಾನಂತೆ ಅ.ಪ ಸಾಗರ ನಿಲಯ ತಾನಂತೆ ಕೂಗಲು ಕಂಬಂದಿ ಬಂದನಂತೆ ನಾಗಶಾಯಿದ್ದ್ವೊಯ್ಕುಂಠಂತೆ ಬೇಗನೆ ಸರಸಿಯಲ್ಲಿದ್ದನಂತೆ ನೀಗಿ ಚಂಚಲಮನ ಬಾಗಿ ವಿಚಾರಿಸಲು ಯೋಗಿ ವಂದ್ಯ ಎಲ್ಲಿಲ್ಲಂತೇ 1 ದ್ವಾರಕಾಪುರದಲ್ಲಿ ಮನೆಯಂತ ಕ್ರೂರನ ಸಭೆಗೊದಗಿದನಂತೆ ಸಾರನಿಗಮಕಗೋಚರನಂತೆ ಪೋರಗೆ ದೊರೆತ್ವವಿತ್ತನಂತೆ ಸಾರಮನದ ವಿಕಾರವಳಿದು ತಿಳಿ ಅ ಪಾರಮಹಿಮ ಯಾರೆಲ್ಲಂತೇ 2 ಘೋರರಕ್ಕಸ ಸಂಹರನಂತೆ ಸೇರಿಭಕ್ತರ ಸಲಹುವನಂತೆ ಮೂರು ಲೋಕಗಳ ದೊರೆಯಂತೆ ಸಾರಥಿತನ ಮಾಡಿದನಂತೆ ಮೂರುಲೋಕದ ಧಣಿ ಓರ್ವ ಶ್ರೀರಾಮನೆ ಆರಾಧಿಪರಲ್ಲಿ ಹಾನಂತೆ 3
--------------
ರಾಮದಾಸರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ಹೊಡಿ ಚೋಕ ಒಡೆಯ ಶ್ರೀ ಹರಿಪಾದ ಪೊಡವಿತ್ರಯದಧಿಕೆಂದು ಪ ಸಾಧು ಸಜ್ಜನರಿಗೆ ಆಧಾರವಾದ ಪಾದ ಪಾದ ಬಹು ಮಿಗಿಲೆಂದು 1 ಪಾರವಾರಿಧಿ ಕಡೆದು ಪೀರಿದಮೃತಪಾದ ಘೋರರಕ್ಕಸರೊದೆದಪಾರಮಹಿಮ ಪಾದೆಂದು 2 ಗೋವಳರಾಳಿದ ಪಾವನ ಶ್ರೀಪಾದ ದೇವ ಶ್ರೀರಾಮಪಾದಕಾವಪಾದೀಡಿಲ್ಲೆಂದು 3
--------------
ರಾಮದಾಸರು
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ