ತೋರು ನಿಜಜ್ಞಾನ ಸುಖವ
ಮಾರನಯ್ಯ ಮರೆಯ ಬಿದ್ದೆ ಪ
ಪಾರಮಾರ್ಥ ಪರಮ ಸವಿ
ಚಾರಮೆನಿಪ ಪಾವನ ಸುಪಥ ಅ.ಪ
ತೀರದಂಥ ಅಪಾರಭವದ
ವಾರಧಿ ಈಸಿ ಘೋರಬಡುವೆ
ನೀರಜಾಕ್ಷ ನಿಗಮವಿನುತ
ಪಾರುಮಾಡು ಕಾರುಣ್ಯಶರಧಿ 1
ವಿಷಯಲಂಪಟ ಮುಸುಕು ಮುಸುಕಿ
ವ್ಯಸನಚಿತೆಯೋಳ್ ಬಸವಳಿದೆ
ಅಸಮಹಿಮ ತವಪಾದ
ಕುಸುಮ ಮರೆದು ಕೆಟ್ಟೆನಭವ 2
ನಾಶಮತಿಯಿಂದಾಸೆಗೈದ
ದೋಷಗಳನ್ನು ಕ್ಷಮಿಸಿ ಬೇಗ
ಪೋಷಿಸಿಭವ ಶ್ರೀಶ ಶ್ರೀರಾಮ
ದಾಸಜನರುಲ್ಲಾಸ ಪ್ರಭು 3