ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು