ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ ಸಿರಿ ಹರಿಯೆ ಚಿ ಪ ನೀ ಬರುವೆಂದಬುಜಾಭವಾದೀ ಸುರರು ಕಾದೂಕೊಂಡಿಹರು ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು ಈ ಭವನವನು ನೀ ಪಾವನ ಮಾಡಲು ಅ.ಪ ಕರೆದರೆ ಬರೆ ಯಾಕೊ ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ ಕೊಡುವ ದೊರೆಯೆಂದು ದೃಢದಿ ತಿಳಿದು ನಿ ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1 ಭವ ಶರಧಿಗೆ ನಾವೆ ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ ಒಡೆಯ ನೀನಲ್ಲದೆ ಬಡದೇವತೆಗಳು ಕೊಡಬಲ್ಲವೆ ಪೇಳು ತಡಮಾಡದೆ ನೀ 2 ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು ಪದುಮನಾಭನೆ ನೀ ಸದಯದಿ ನೋಡಿ ಇದನೆ ಕರುಣಿಸು ನಿನ್ನ ಪದಸೇವೆಯನು 3 ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ ಪರಿ ಬೇಡುವೆ ನಿನ್ನ ಪದಸೇವಕರ ಪರಿಚಾರಕರನೆನಿಸೊ ಪರಮ ದಯಾಳೊ 4 ಮಾತಿದು ಪುಸಿಯಲ್ಲ ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ ದೂರ ನೋಡುತಲಿ ಘೋರಪಾತಕರೊಳು ಸೇರಿಸದೆನ್ನನು ಪಾರುಮಾಡಲು ಬೇಗ5
--------------
ರಂಗೇಶವಿಠಲದಾಸರು