ದೀನಪಾಲನ ನಾರಿಮಾನರಕ್ಷಣ ಸಿರಿ
ಪ್ರಾಣರಮಣ ಹರಿ ನಾರಾಯಣ ಪ
ಸೋಮಕಾಸುರಹರ ಕಾಮಿತ ಪರಿಹರ
ಭೂಮಿಜೆಜನಕಜಯ ಜನಾರ್ದನ
ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ
ಪ್ರೇಮ ಆನಂದ ಹರಿ ನಾರಾಯಣ 1
ಪಾಷಾಣಪಾವನ ದೋಷನಿವಾರಣ
ನಾಶರಹಿತ ಸುಪ್ರಕಾಶನೆ
ಶೇಷಶಯನ ಗಿರಿವಾಸ ದಾಸರ ಪ್ರಾಣೇಶ
ಕೇಶವ ಹರಿ ನಾರಾಯಣ 2
ವಾರಿಧಿಮಥನ ನಾರದವಂದನ
ಕಾರುಣ್ಯನಿಧಿ ಕರುಣಾಂತರ್ಗತ
ನಾರಸಿಂಹ ದಿವ್ಯಾಪಾರಮಹಿಮ ಸುರ
ಘೋರನಿವಾರ ಹರಿ ನಾರಾಯಣ 3
ಶಾಂತ ಶಾಂತಾಕಾರ ಶಾಂತಜನಾಧಾರ
ಶಾಂತಿ ಸದ್ಗುಣಧಾಮ ಶುಕ್ಲಾಂಬರ
ಶಾಂತಮೂರುತಿ ಭೂಕಾಂತ ಪರಮವೇ
ದಾಂತಾತೀತ ಹರಿ ನಾರಾಯಣ 4
ನಾಥ ಜಾನಕೀಪ್ರಾಣ ಭೂತಳಪಾವನ
ದಾಥ ಜಗನ್ನಾಥ ವಿಶ್ವಾಂಬರ
ಪಾತಕಹರ ವಿಧಿತಾತನೆ ನಿಜಸುಖ
ದಾತ ಶ್ರೀರಾಮ ಹರಿ ನಾರಾಯಣ 5