ನಗೆಗೇಡವ್ವಾ ತಂಗಿ ನಗೆಗೇಡು
ಹಗರಣ ಸಂಸಾರ ತಿಗಡಿ ಬುಗಡಿ ಬಲು ¥
ಕಾಲನಾಗಿ ದ್ರವ್ಯಕೂಡಿಸಿದ ಮಹ
ಮೇಲು ಮಾಳೀಗೆ ಮನೆ ಕಟ್ಟಿಸಿದ
ಕೀಳುಸತಿಸುತರೆಂದು ನಂಬಿದ ಮತ್ತು
ಮಾಲಿನೊಳಗೆ ಇಟ್ಟು ಆಳಿದ
ಕಾಲವೊದಗಿ ಬಂದು ದಾಳಿಟ್ಟೊಯ್ಯಲು ತನ್ನ
ಆಳಿಗಿಟ್ಟುಣುತಾರ ಹೋಳಿಗೆ 1
ಕುಂದಿಪೋಗುವಕಾಯ ಖರೆಯೆಂದ ಇದ
ರಂದ ತಿಳಿಯದೆ ಬಲುಮೋಹಿಸಿದ
ಬಂದಕಾರ್ಯದ ಬಗೆ ಮರೆದ ಸುಳ್ಳೆ
ದಂದುಗದೊಳು ಬಿದ್ದು ನಿಗರ್ಯಾಡಿದ
ಒಂದೂಕಾಣದೆ ಬಂದದಾರಿಹಿಡಿದ 2
ಪರಮ ಸನ್ಮಾರ್ಗವನು ತೊರೆದ ಬರಿ
ಬರಿದೆ ದು:ಖದೊಳಗುರುಳಿದ
ಹರಿಯ ಶರಣರನು ನಿಂದಿಸಿದ ಸದಾ
ದುರುಳರಾವಾಸದೊಳಗಾಡಿದ
ಪರಮ ಕರುಣಾಕರ ವರದ ಶ್ರೀರಾಮನ
ಚರಣ ಪಿಡಿಯದೆ ಘೋರನರಕಕ್ಕೀಡಾದ 3