ಹೀಗೆ ನಿರ್ದಯ ಮಾಡುವರೆ ಶ್ರೀಮನೃಹರೇ ಪ
ಹೀಗೆ ನಿರ್ದಯ ಮಾಡುವರೆ ಕರುಣಾಂಬುಧೆ
ಪಾಲನ ಅ.ಪ
ನಿರ್ಜರ ಪೋಷಿತ
ಘೋರದೈತ್ಯೇಯ ಸಂಹಾರ ಕೌಸ್ತುಭರತ್ನಹಾರ ಭೂಷಿತ
ಯದುವೀರ ಮಾರಮಣನೇ 1
ಶಶಿವದನ ನೀರದ ಸಂಕಾಶ
ಮಧು ಮುರಾಂತಕ ಕುಂದರದನ ಸುಂದರಗಾತ್ರ
ಸದಮಲ ತೇಜ ಕಂಜದಲ ಲೋಚನ ಹರೇ 2
ಗರುಡವಾಹನ ಶ್ರೀಲೋಲ
ಕರಿರಾಜವರದ ಸುಸ್ಥಿರ ಕೀರ್ತಿಸಾಂದ್ರಮಂ
ದರಧರ ವರ ಹೆನ್ನೆಪುರ ಲಕ್ಷ್ಮೀನರಸಿಂಹ 3