ಒಟ್ಟು 24 ಕಡೆಗಳಲ್ಲಿ , 15 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷಪ್ರಭುಗಳ ರಚನೆಗಳು ಪಾಲಿಸು ಶ್ರೀಹರಿಯೇ | ಸದ್ಗುಣ | ಶೀಲ ಭಾಗ್ಯನಿಧಿಯೇ | ಶ್ರೀಲಲಾಮ ಶೇಷಾಚಲಾಧೀಶ ಶ್ರೀಲೋಲ ಬಾಲಭಾಸ್ಕರ ಸಂಕಾಶನೆ ಪ ಕಂಡವರಿಗೆರಗಿ ದೈನ್ಯವ | ಗೊಂಡೆ ಖಿನ್ನನಾಗಿ ಭಂಡನಾಗಿ ಬಳಲಿಸಿ ಬಹು ಕಾಯವ ದಂಡಿಸಿದೆನು ರಕ್ಷಿಸೋ ಶ್ರೀಹರಿಯೇ 1 ಯಾರಿಗೆ ದೂರುವೆನು ಭಕ್ತೋ | ದ್ಧಾರನಲ್ಲವೆ ನೀನು | ಘೋರದುರಿತ ದಾರಿದ್ರ್ಯದ ವ್ಯಥೆಯ ಇ- ನ್ಯಾರಿಗೊರೆವೆ ಅದನ್ಯಾರು ಕಾವರೈ 2 ಏನಪರಾಧವ | ಗೈದೆ ನಾ -ನೇನು ಪಾಪಾತುಮನೋ | ಈಸಪರಾಧವನೆಣಿಸದೆ | ಎನ್ನಯ | ಕ್ಲೇಶವ ಪರಿಹರಿಸೋ ದಯಾನಿಧೇ 3 ಪರ ಪುರುಷೋತ್ತಮ | ಪರಂಜ್ಯೋತಿ ಪರಬ್ರಹ್ಮಸ್ವರೂಪನೆ 4 ಗಮನ ಮಾಧವ ಕರುಣಾ-| ಪಾಂಗರಂಗ ಮಂಗಲಾಂಗ ರಕ್ಷಿಸು 5
--------------
ಅನ್ಯದಾಸರು
(ನಾರದ ಪ್ರಾರ್ಥನೆ) ನಾರದ ಮುನಿಯ ನಂಬಿರೋ ಸಜ್ಜನರೆಲ್ಲ ಪ. ನಾರದ ಮುನಿಯ ನಂಬಿ ಸೇರಿ ರಮೇಶನ ಘೋರದುರಿತ ಪರಿಹಾರಗೊಳಿಸುವಂಥ ಅ.ಪ. ಫಾಲದಿ ತಿಲಕ ನಾಮವು ಕಂಠದ ಮೇಲೆ ಜೋಲುವ ತುಳಸಿ ಮಾಲೆಯು ತಾಳ ವೀಣೆಗಳಿಂದ ಕಾಲಾನುಗುಣಸ್ವರ ಮಾಲೆ ತೋರುತ ಲಕ್ಷ್ಮೀಲೋಲನ ವಲಿಸಿದ 1 ವೇದೋಪನಿಷತ್ತುಗಳಗಾಂಧರ್ವ ವಿದ್ಯ ಹಾದಿಲಿ ತರಲು ಬಲ್ಲ ಬೋಧಿಪ ಪರತತ್ವ ವಾದವ ಸುರಕಾರ್ಯ ಸಾಧಿಸಿ ಹರಿಯ ಪ್ರಸಾದಕೆ ಪಾತ್ರನಾದ 2 ಪ್ರಲ್ಹಾದ ಧ್ರುವ ದ್ರೌಪದಿ ಮುಖ್ಯ ವೈಷ್ಣವ ರೆಲ್ಲರೀತನ ದಯದಿ ಎಲ್ಲ ಠಾವಲಿ ಲಕ್ಷ್ಮೀವಲ್ಲಭನಿಹನೆಂಬ ಸೊಲ್ಲ ತಿಳಿದು ಪರಮೋಲ್ಲಾಸ ಪಡೆದರು 3 ದೇವಾಸುರರ ಬಳಿಗೆ ಪೋಗುವ ತನ್ನ ಭಾವಾ ತೋರನು ಕಡೆಗೆ ಆವಾವ ಜನಕನುವೀವ ಮಾತುಗಳಾಡಿ ಪಾವನಾತ್ಮಕ ಹರಿ ಸೇವಾಫಲವ ಕೊಂಬ 4 ಬಂದನು ಕಲಿಯುಗದಿ ದಾಸರೊಳು ಪುರಂದರ ನಾಮದಲೀ ಮಂದಮತಿಯ ಕಳೆವಂದದಿ ಪ್ರಾಕೃತ ದಿಂದ ವೆಂಕಟಪತಿಯಂದವ ತಿಳಿಸಿದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸು ನರಹರಿಯೇ ಸ್ಮರಣಿಯ ಕರುಣಿಸು ನರಹರಿಯೇ ಪ ಕರುಣಿಸುವದು ತವಸ್ಮರಣೆ ನಿರಂತರ ಧರಣಿ ಸುರಪ್ರಿಯ ಚರಣಕೆರಗುವೆನು ಅ.ಪ ಶರಣರ ಸುರತರುವೇ ಕರುಣಾ ಶರಧಿ ಶಿರಿಯಧೊರೆಯೆ ಸರಸಿಜ ಭವಮುಖರರಸನೆ ತವಪದ ಸರಸಿಜದಲಿ ಮನವಿರಿಸುವಂತೆ ಜವ 1 ಕಂದನನುಡಿಕೇಳಿ ಸ್ತಂಭದಿ ಬಂದಿಯೊ ವೇಗದಲಿ ವಂದಿಸುವೆನು ಭವಬಂಧ ಬಿಡಿಸಿ ಮನ ಮಂದಿರದಲಿ ತವ ಸಂದರುಶನವನು 2 ಚಾರು ಕೃಷ್ಣ ತೀರಾಕಾರ್ಪರಾ ಗಾರನೆ ಸ್ಮರಿಸುವರ ಘೋರದುರಿತ ಹರನಾರಸಿಂಹ ನಿ ನ್ನಾರಧಕರೊಳು ಸೇರಿ ಸುಖಿಸುವಂತೆ 3
--------------
ಕಾರ್ಪರ ನರಹರಿದಾಸರು
ಕಾರುಣ್ಯ ಮೂರುತಿ ಕರುಣಾಸಾಗರ ಪ ಘೋರದುರಿತ ಸಂಹಾರ ಜಗತ್ಕರ್ತ ಮಾರ ಜನಕ ಶ್ರೀ ಮನೋಹರನ ವಾರಿಜಾಂಬಕ ಕೃಷ್ಣ ವಾರಧಿ ಶಯನನ ಪಾರಿಮಾರ್ಥಿಕ ನರಿತು ಪರಮ ಹರುಷದಿಂದ 1 ಕುಂಭಿನೀ ಪತಿರಾಮ ಕೋದಂಡಧರ ಗುಣ ಗಂಭೀರ ಪುರುಷ ಶ್ರೀ ಘನ ಮಹಿಮನ ಶಂಬರಾರಿಯ ಕೊಂದ ಶಿವನ ರಕ್ಷಿಸಿದಂಥ ಕಂಬು ಕಂಧರ ಕನಕಾಂಬರ ಭೂಷಣನಾ 2 ಅಗಣಿತ ಚರಿತ ಅನಂತ ಅವತಾರನ ನಿಗಮಗೋಚರ ವಿಷ್ಣು ನಿಜ ನಾಮವು ಬಗೆ ಬಗೆಯಲಿ ಅತಿ ಭಕುತಿಯಿಂದಲಿ ಜಯ ಜಗದೊಡೆಯ ಹೆನ್ನ ವಿಠ್ಠಲನ ಜಿವ್ಹದಿ 3
--------------
ಹೆನ್ನೆರಂಗದಾಸರು
ತತ್ವದರ್ಶನದಲ್ಲಿ ಮಂತ್ರಮಹಿಮೆ ಸ್ವಾಮಿಗರ್ಪಿಸೋ ಮಾನವಾ ಪ ಕಾಮಿತಾರ್ಥವ ಬೇಡದೆ ಶತ ಸಾಮಜಾಪತಿ ನೆನೆವ ಮಂತ್ರ ಅ.ಪ ದಿವಿಜರನಿಶ ಪಠಿಪ ಮಂತ್ರ ಜವನ ಭಟರ ಸದೆದ ಮಂತ್ರ 1 ಲಲನೆಪಾಂಚಾಲಿ ಹೇಳಿದ ಮಂತ್ರ ಬಲಿಗೆ ವರವನಿತ್ತ ಮಂತ್ರ 2 ಸಾರಸಭವನುಲಿದ ಮಂತ್ರ ಘೋರದುರಿತನಾಶಕ ಮಂತ್ರ ಸಂ ಸಾರಜಲಧಿ ದಾಟಿಪ ಮಂತ್ರ 3 ಉಸುರಲಳವೆ ಪರಮ ಮಂತ್ರ 4 ನರನ ಪಾಲಿಪೊಂದು ಮಂತ್ರ 5 ಸಿರಿಗೋವಿಂದನೆಂಬ ಮಂತ್ರ ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನರರೇನು ಬಲ್ಲರು ಪ ಘೋರದುರಿತ ಸಂಹಾರ ಕೇಶವಧೀರಾ ಮಾರಜನಕ ಸುಂದರ ಹೇ ವೀರಾ ಸುರಾಸುರಪವಂದ್ಯ ಸುಗುಣ ಶ್ರೀಗೋವಿಂದ ವೀರಾ ಶ್ರೀರಾಮಾವತಾರ ಎತ್ತಿದ ಧೀರಾ 1 ಆದಿಮೂಲ ಕರ್ತನೆಂದು ಅರಿತು ಮನದಿ ಶೋಧಿಸೆ ಸಕಲ ಸಾರವನು ಭೇದಾನರಿತು ಯದಾಯುಗ ಭಟಗಾಳಾರು ಮೋದದಿ ನವಯುಗದ ಮರ್ಮವ ನರಿತು 2 ಸಕಲ ಪ್ರಪಂಚವೆಂಬ ಸುಖವನ್ನೆ ಅತಿಗಳೆದು ಮುಕುತಿ ದಾಯಕ 'ಹೊನ್ನ ವಿಠ್ಠಲ’ ನೆಂದೆನ್ನು ಭಕುತಿಯಿಂದಲಿ ಸದಾಭಾವನೆಯ ನೀ ಬಿಡದೆ ಅಕಳಂಕ ಮಹಿಮನ ಅರಿತು ಸ್ತುತಿಸುವರಿಗಲ್ಲದೆ 3
--------------
ಹೆನ್ನೆರಂಗದಾಸರು
ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ಅಹಂಬ್ರಹ್ಮಭಾವವ ಬಿಡಿಸೋ ಪ ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ ನಿತ್ಯ ನಿರ್ಲಿಪ್ತನಹುದೋ 1 ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ ಲೋಕಗಳನೆಲ್ಲ ಮಾಳ್ವೆ 2 ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ ಬನ್ನ ಪಣ್ಣನ್ನ ನಿರ್ಮಿಸಿದೆಯೋ 3 ಪಣ್ಣಿಗೆ ನಾಲ್ಕು ರಸವೋ ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4 ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5 ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6 ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7 ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ ಎನ್ನ ಬಂಧಪ್ರಕೃತಿಯನೆ ಹರಿಸೋ 8 ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9 ಮುಮುಕ್ಷುಗಳಿಗೆ ಸಾಕ್ಷಿ ಮನದಕ್ಷಿಯೊಳು ಪೊಳೆವೇ 10 ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು ತ್ವಧ್ಭಕ್ತಿಯ ಕೊಡು ನಿತ್ಯ11 ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ ಎನಗೆ ಉತ್ತಮಗತಿ ತೋರದೇ12 ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ ಚಾರು ಚರಣಸ್ಮರಣಾರಾಧನೆ (ಅದು) ಸಾಕೋ 13 ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ ಪಾರುಗಾಣಿಸಿ ಪೊರೆಯೋ 14
--------------
ಉರಗಾದ್ರಿವಾಸವಿಠಲದಾಸರು
ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು
ಭಾರತೀಪತಿ ಮೂರುತಿ ಮಾರುತಿ ಕಾಯೊ ಪ ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ ನಿತ್ಯ ನಿಯಾಮಕ ಗುರು 1 ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ ಪರಮೇಷ್ಠಿ ಪದ 2 ನಂಜಯನಾಗ್ರಜನೆ ಮೂರ್ಜಗ ಗುರು 3 ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4 ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5 ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6 ಸರ್ವನಿಯಾಮಕ ಶರ್ವರೊಂದಿತಪಾದ ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7
--------------
ಉರಗಾದ್ರಿವಾಸವಿಠಲದಾಸರು
ಭಾರತೀಯ ರಮಣ ಪ್ರಾಣಾ | ಜಗಭಾರ ನಿನ್ನದಯ್ಯ ಪವನಾ ಪ ಘೋರದುರಿತ ಅಟವಿ ದಹನಾ | ಮಾರನಯ್ಯನ ತೋರೊ ಕರುಣ ಅ.ಪ. ಪಾದ ಪಾದ ಬಿಸಜ ಭವ ವಾರಿಧಿ ಮುರ | ವೈರಿಯ ಪದ | ತೋರುತ ಉ | ದ್ಧಾರವಗೈ 1 ದಿವಿಜ ವಿನುತಾ | ನೀ ಸಲಹೊ ಸಕಲ ವ್ಯಾಪ್ತಾ ||ವೀಶ ಶೇಷ | ಈಶಾ ಸುರ | ಪೇಶಾ ರವಿ | ಭಾಸಾ ಸ್ವಪ್ರಕಾಶಕ ಜಗ | ಪೋಷಕ ಚಿ | ತ್ತಾಕಾಶದಿ | ಭಾಸಿಸನಿಲ 2 ಕರಿ ಪರಿ ಪರಿಯಲಿ | ನಿರಂತರ 3
--------------
ಗುರುಗೋವಿಂದವಿಠಲರು
ಸಾರಸಾಕ್ಷ ಘೋರದುರಿತ ದೂರಮಾಡೈ ಪ ಮಾರಜನಕಪಾರ ಮಹಿಮ ದೂರ ನೋಡದೆ ಬಾರೊ ಬೇಗ ಬಾರಿಬಾರಿಗೆ ನಿನ್ನ ನಂಬಿ ಸಾರಿಕೂಗಿ ಬೇಡುವೆನು 1 ಮೂಢತನದಿ ನಾಡ ತಿರುಗಿ ಖೋಡಿಯಾದೆ ಗಾಢಭಕುತಿಲಿ ಗಾಢ ನಿಮ್ಮ ಪಾವನ ಚರಿತ ರೂಢಿಯೊಳು ಧನ್ಯವಾಗದೆ 2 ಸಿರಿಯರಮಣ ಚರಣನಳಿನ ಮರೆಯಹೊಕ್ಕೆ ಕರುಣದೆನ್ನ ಮೊರೆಯ ಕೇಳಿ ದುರಿತದಿಂದ ಸೆರೆಯ ಬಿಡಿಸೆನ್ನ ಸಿರಿಯರಾಮ 3
--------------
ರಾಮದಾಸರು
ಹರಿಯೆ ಹದಿನಾಲ್ಕು ಲೋಕದ ದೊರೆಯೆ ಪ ಕಮಲ ಷಟ್ ಚರಣನೆನಿಸಿ ಎನ್ನ ಪೊರೆವುದು ಸಂತತ ಅ.ಪ ವೀರಭಕ್ತ ಪ್ರಹ್ಲಾದ ವರದ ಕರುಣಾರಸ ಪರಿಪೂರ್ಣ ಭವ ಸನ್ನುತ ಚಾರ ಚರಣನಳಿನ ಸಾರಿದ ಪ್ರಣತ ಜನಾರ್ತಿನಿವಾರಣ ಘೋರದುರಿತ ಮದಗಜ ಪಂಚಾನನ ನಾರದ ಮುನಿವರ ಸೇವಿತ ಚರಣ ಸಾರಸಾಕ್ಷಿ ಶ್ರೀ ಕರಿಗಿರಿ ನಿಕೇತನ 1
--------------
ವರಾವಾಣಿರಾಮರಾಯದಾಸರು
(2) ದರಿಶಕುಪ್ಪ (ಶ್ರೀರಂಗಪಟ್ಟಣದ ಸಮೀಪ)ದರಿಶಕುಪ್ಪ ಶ್ರೀ ಅಂಜನಿತನಯದರುಶನ ಕೊಡು ಬೇಗ ದಯದಿಂದಾ ಪಸಿರಿರಘುಕುಲವರ ಸೇವಾನುಕೂಲಸ್ಮರಿಸುವೆ ನಿಮ್ಮ ಪಾದಸರಸಿಜಯುಗಳ 1ಹರಿಹರ ಬ್ರಹ್ಮಾದ್ಯಮರ ಸುಪೂಜಧರಣಿಜಾಪ್ರಾಣೋದ್ಧಾರ ಸುತೇಜ2ಘೋರದುರಿತ ಪರಿಹಾರ ಕಪೀಶಾಪಾರಿಜಾತತರುಪ್ರಾಂತ್ಯನಿವೇಶಾ3ಲವಣಜಲಧಿಪದಲಂಘನತುಂಗಪವನಾತ್ಮಜ ರಿಪುಭಂಗ ಶುಭಾಂಗ 4ರಾಮಾನುಜ ಪ್ರಾಣರಕ್ಷಣ ದೀಕ್ಷಾಕಾಮಾದ್ಯವಗುಣ ಖಂಡನಾಧ್ಯಕ್ಷ 5ಮರಕತಮಣಿಮಯ ಮಂಜುಳ ಭೂಷಾಧರೆಯೊಳ್ ತುಲಸೀದಾಸ ಸುಪೋಷಾ 6
--------------
ತುಳಸೀರಾಮದಾಸರು
ದಾರಿಯ ತೋರೊ ಮುರಾರಿ ಮುಂದಣದಾರಿಯ ತೋರೊ ಮುರಾರಿ ಪ.ದಾರಿತೋರುಕಂಸಾರಿಭವಾಂಜನಪಾರಾವಾರಉತ್ತಾರಣಗೈಯುವಅ.ಪ.ಮಾಯಾಶ್ರಿತನಾಗಿಹೆನಲ್ಲೊ ಮೋಕ್ಷೋ-ಪಾಯಭೇದಂಗಳ ಮರತೆನಲ್ಲೊಕಾಯಜಪಿತ ಕಮಲಾಯತಲೋಚನಕಾಯದೊಳಗೆ ಸನ್ನಾಯದಿ ನೋಡುವ 1ದುಃಖವಿಲ್ಲದೆ ಸುಖವಿಲ್ಲ ಇದಒಕ್ಕಣಿಪರೆ ತುದಿಬುಡವಿಲ್ಲಸೊಕ್ಕಿ ನಡೆದು ಭವಯಿಕ್ಕುಳ ಬಾಯೊಳುಸಿಕ್ಕಿದೆನಲ್ಲವೊ ರಕ್ಕಸವೈರಿಯೆ 2ಬಲ್ಲೆನೆಂಬರೆ ಬಲವಿಲ್ಲಭವಬಲ್ಲೆಯೊಳಗೆ ಸಿಲುಕಿದೆನಲ್ಲಕಲ್ಲೊಳಗ್ನಿ ಕಲಕಿರುವಂದದಿ ಮನದಲ್ಲಿ ನಿನ್ನ ಪದಪಲ್ಲವ ಭಜಿಸುವ 3ಸಾರರಹಿತ ಸಂಸಾರದಿಮಾಯಾನಾರಿ ಗೈದ ಮಮಕಾರದಿಘೋರದುರಿತವಪಹಾರಗೈವ ಲಕ್ಷ್ಮೀನಾರಾಯಣನು ಸೇರಿ ಸೇವಿಸುವಂಥ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಾರಾಯಣಯೆಂದರಾಗದೇ ನಿನ್ನಘೋರದುರಿತದೂರ ಹೋಗದೇವಾರಿಜನಾಭನ ವಲಿಸದೇನರಶಾರೀರದಲಿ ಬಂದು ಫಲವೇನಿದೆ1ಸಾರಷಡ್ರಸಾನ್ನ ಭುಜಿಸುತ್ತಪರದಾರಾಂಶದಲಿ ಮನವಿರಿಸುತ್ತಾಕ್ರೂರಕೃತ್ಯವನಿತ್ಯಗೈಯ್ಯುತ್ತ ಯಮ-ನೂರಿಗೆ ಪೋಗುವದೇನು ಹಿತ2ನಡೆವಾಗ ನುಡಿವಾಗ ಕುಡಿವಾಗ ವೀಳ್ಯಮಡಿವಾಗ ಕೊಡುವಾಗ ಪಡೆವಾಗ ಜಲಜನಾಭನಎಡಬಿಡದೀಗಾ ನೆನೆಕಡೆಗೆ ನಾಲಿಗೆ ಬಿದ್ದು ನುಡಿಯಲಾಗಾ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಈಶಣತ್ರಯದಲಿ ಸಿಲುಕುತ್ತಾ ಒಂದುನಶಿಸೆ ತಾಡಕಕೃತಿಗೈಯುತ್ತಾಎಸೆವ ಮೂರು ವೈರಾಗ್ಯ ತಾಳುತ್ತಾ ಸುತ್ತುಈಶ ತ್ರಿಮೂರ್ತಿ4ಜನಿಸುತ್ತಲೇನ ತಂದಿರುವೆಯೋ ನಾಳೆತನುವನೀ ..... ಲೇನನೊಯ್ವೆನೊತನುಮಧ್ಯ ಭಾಗ್ಯದಿ ಮೆರೆವೆಯೋ ನಿನ್ನಜನುಮದ ನೆಲೆಯ ನೀನರಿವೆಯೊ5ಇಂದುಸುಕರ್ಮ ಮಾಡದೆ ನೀನು ನಾಳೆಎಂದರೆ ತನುವಿಗೆ ನಿಜವೇನುಚಂದದಿ ಸ್ಮರಿಸು ಗೋವಿಂದನು ತಾನೆಬಂದು ದಾಸರ ನೋಡಿ ಪೊರೆವಾನು6
--------------
ಗೋವಿಂದದಾಸ