ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಪುಣ್ಯೋದವೇ ಈ ಪುಣ್ಯಭೂಮಿಯೊಳು ಪನ್ನಂಗಶಯನ ಸನ್ನುತಿಪ ದಾಸರಿಗೆ ಪ ಕಡುಸಿರಿವಂತರಾದೊಡೆ ಬಡವರ ಬಾಯ್ಬಡಿಯದೆ ಕೊಡುವಿಡುವ ಕೆಡದತಿ ಪುಣ್ಯ ಬಡತನವಿರ್ದಡೆ ಎಡೆಬಿಡದೆ ಒಡಲೊಳು ಜಡಜಾಕ್ಷನಡಿಧ್ಯಾನ ಹಿಡಿದ ಮಹಪುಣ್ಯ 1 ಮಡದಿಯರೊಂದಿಗೆ ಬಿಡದೆ ಸಂಸಾರಗೈಯೆ ದೃಢಯುತರು ಮನೆಯೊಳಗಡಿಯಿಡುವ ಪುಣ್ಯ ಸಡಗರದಿ ಮಕ್ಕಳನ್ಹಡೆದು ಮೋಹದಿ ಜಗ ದೊಡೆಯನ್ಹೆಸರಿಟ್ಟು ನುಡಿಯುವ ಪುಣ್ಯ 2 ತಿರುಕರಾಗಿರ್ದಡೆ ತಿರಿದು ತಂದನ್ನವನು ಹರಿಯಪ್ರಸಾದವೆಂದು ತಿರಿದುಣುವ ಪುಣ್ಯ ಪರಮಪುರುಷನ ಚರಣ ನಿರುತ ಸ್ಮರಿಪ ಪುಣ್ಯ 3 ಹಿಂದೆ ಮುಂದೆ ತಮಗೆ ನಿಂದೆಯಾಡಲು ಆ ನಂದದಿ ಹಿಗ್ಗದ ಕುಂದದ ಪುಣ್ಯ ಮಂದಿಮಕ್ಕಳು ಬಿಡದ್ಹೊಂದಿಸಲದು ಹರಿ ಗೆಂದು ಅರ್ಪಿಸಿ ಮನಸೊಂದೆಮಾಡಿದ ಪುಣ್ಯ 4 ನೀರಿನೊಳಿರಲೇನರಣ್ಯದೊಳರಿಲೇನು ಘೋರತಾಪದಿರಲೇನಪಾರಜ್ಞಾನಿಗಳು ಪಾರಮೋಕ್ಷಕ್ಕಧಿಪ ಧೀರ ಶ್ರೀರಾಮಪಾದ ವಾರಿಜದೊಳು ಮನ ಸೇರಿಸಿದ ಪುಣ್ಯರಿಗೆ5
--------------
ರಾಮದಾಸರು
ಮೂರ್ತಿ ಹರಿ ಎಲ್ಲ ಕೇಳುವುದೆಲ್ಲ ನಿನ್ನ ಕೀರ್ತಿ ಪ ಎಲ್ಲ ಸಾರುವುದೆಲ್ಲ ನಿನ್ನ ವಾರ್ತಿ ಎಲ್ಲೆಂದರಲ್ಲೆ ನಿನಗೆ ಶರಣಾರ್ಥಿ ಅ.ಪ ಕಲ್ಲಿನಲ್ಲಿ ನಿನಗೆ ಶರಣಾರ್ಥಿ ನೆಟ್ಟ ಮುಳ್ಳಿನಲ್ಲಿ ನಿನಗೆ ಶರಣಾರ್ಥಿ ಕಳ್ಳರಲ್ಲಿ ನಿನಗೆ ಶರಣಾರ್ಥಿ ಮಹ ಕುಳ್ಳರಲ್ಲಿ ನಿನಗೆ ಶರಣಾರ್ಥಿ ವೈರಿ ಕೊಲ್ಲಲುಬರಲವ ರಲ್ಲೆ ನಿನಗೆ ಬಹು ಶರಣಾರ್ಥಿ 1 ಊರೊಳು ನಿನಗೆ ಶರಣಾರ್ಥಿ ಮಹ ದಾರಣ್ಯದಲಿ ನಿನಗೆ ಶರಣಾರ್ಥಿ ಘೋರತಾಪದಿ ನಿನಗೆ ಶರಣಾರ್ಥಿ ಬಿಡದಾ ಪಾರ ಸೌಖ್ಯದಿ ನಿನಗೆ ಶರಣಾರ್ಥಿ ಸಾರವಿಲ್ಲದ ಸಂಸಾರದಿ ನಿನಗೆ ಬಾರಿಬಾರಿಗೆ ಬಹು ಶರಣಾರ್ಥಿ 2 ನಿನಗೆ ಜಾಗ್ರದಲಿ ಶರಣಾರ್ಥಿ ಬಿದ್ದ ಕನಸಿನಲಿ ನಿನಗೆ ಶರಣಾರ್ಥಿ ಘನ ನಿದ್ರದಿ ನಿನಗೆ ಶರಣಾರ್ಥಿ ಬಿಡ ದನುದಿನದಲಿ ನಿನಗೆ ಶರಣಾರ್ಥಿ ತನುಮನಧನದಲಿ ಜನಕ ಶ್ರೀರಾಮ ನಿನಗೆಣಿಕಿಲ್ಲದ ನಿಜ ಶರಣಾರ್ಥಿ 3
--------------
ರಾಮದಾಸರು