ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಮುತ್ತೂರೇಶ ಶ್ರೀ ಮರ್ಕಟಾ ತುಲಸÀದಲಾಯತಾಕ್ಷ ಶ್ರೀರಾಮದೂತಾ ಪ ಎತ್ತ ಚಲಿಸದಂತೆನ್ನ ಮನವ ತವ ಪಾದ ಸರೋಜದೊಳಿಟ್ಟು ಪತ್ತು ತಲೆಯನರಿಯಡಿದಾವರೆಯನು ನಿತ್ಯ ಭಜಿಸುವಂದದಿ ಮಾಡಯ್ಯ 1 ಆಂಜನೇಯಾ ಭೀಕರ ರೂಪಾ ದಾನವ ಘಾತಕರಾ ಸತಿ ಮೇದಿನಿ ಸುತೆಯಳ ಮಂಜುಮಾಡಿ ಖಲ ರಾವಣನೊಯ್ಯಲು ಅಂಜದಿರೆಂದವನಿಪ- ನಿಗಭಯವಿತ್ತು ಮಂಜುಂ ಕಾರ್ಯವ ನೆರೆದಪೆನೆಂದೀ 2 ಭಾರತೀಯ ಪವÀನತನಯ ಘನತರ ಕಾರ್ಯಕರ್ತಾ ಶ್ರೀರಾಮದೂತಾ ಘೋರತರದ ಅಪರಾರ್ಣವನು ಹಾರಿ ದಾಂಟಿ ಲಘು ದಶಮುಖಪುರವನು ವೀರರಾಘವನಂಘ್ರಿಗೆ ಎರಗಿದಿ ನೀ 3 ದಾನವನಾಶಾ ಜಾನಕೀತ್ರಾತ ದಶರಥಸುತ ಭಜಕಾ ಆನಂದತೀರ್ಥ ದಾನವ ಕೋಟಿಯ ನಡೆದು ಜವದಿ ನೀ ಮೌನಿ ಹರಿಗೆ ಸಹಾಯಾಗ್ರಣಿಯಾಗಿ ಹೀನ ರಕ್ಕಸ ದಶ- ಶಿರವನರಿಸಿ ನೀ ನರಸಿಂಹವಿಠಲನ ದಾಸನೆನಿಸಿದೀ 4
--------------
ನರಸಿಂಹವಿಠಲರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ಸಾಧು ಸಂಗತಿ ಮಾಡೋ ಎಲೆ ಮನಾ ಸಾಧು ಸಂಗತಿ ಮಾಡು ಪ ಘೋರತರದ ಸಂಸಾರ ಸಾಗರದಿ ಪಾರು ಮಾಡಿ ಮುರಾರಿಯ ಸ್ಮರಿಸುವ 1 ಕರ್ಮಫಲಾಪೇಕ್ಷಿಸದಲೇ ಮಾಡಿ ತಾ ನಿರ್ಮಲ ಚಿತ್ತದಿ ಹರಿಯನು ಪೊಗಳುವಾ 2 ತನ್ನ ಪಿತ ಹನುಮೇಶವಿಠಲಗೆ ಆತ್ಮಅರ್ಪಿಸಿ ಕೃತಾರ್ಥನಾದನು ಸಾಧು ಸಂಗತಿ ಮಾಡೋ 3
--------------
ಹನುಮೇಶವಿಠಲ