ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ ಭೂದೇವರ ಪೂಜೆ ಮಿಗಿಲು ಬಿಡಬೇಡ ಪ ಉಂಬೋ ದೇವರ ನೋಡಿ ಕರೆತಂದೊಯ್ಯನೆ ಶಂಭು ಶ್ರೀಹರಿ ಎಂದು ಮನತಂದು ಕರು ಪಾದ ತೊಳೆದು1 ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ ವೊತು ಪೂಜೆಯನು ಮಾಡಿರೋ ಎಂದು 2 ಎಡೆಮಾಡಿ ಷಡುರಸಾನ್ನವ ನಂದು ಉಣ ಬಡಿಸೆ ನಾರಿಯರಟ್ಟುದನುತಂದು ಕಡುಬು ಕಜ್ಜಾಯ ಘೃತವನಂದು ಜಗ ದೊಡೆಯ ನುಂಡನು ಸಾಕು ಬೇಕೆಂದು 3 ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು ಮತ್ತೇನಾ ಪೋಪೆನೆಂದರೆ ಪೊಡಮಟ್ಟು ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4 ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ ಪತಿಗಿದು ಪೂಜೆ ಸಂಪೂರ್ಣವಾಗಿ 5
--------------
ಕವಿ ಪರಮದೇವದಾಸರು