ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇಣುನಾದ ಬಾರೊ, ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
--------------
ಪುರಂದರದಾಸರು