ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನೆಗೆ ರಂಗಾ ಕರುಣಾ ಪಾಂಗ ನರಸಿಂಗ ಪ. ಬಾರೋ ನಿನ ಪರಿವಾರ ಸಹಿತಲಿ ವಾರೆರೊಡಗೂಡಿ ನೀರಜಾಕ್ಷನೆ ಭವ ಕರುಣಾಂಬುದೆ ಅ.ಪ. ಪಿಡಿದು ಖಡ್ಗವ ನಿನ್ನ ವಡೆಯನ ತೋರೆಂದು ಘುಡುಘುಡಿಸಲು ಕಂದ ವಡನೆ ಕೂಗೆ ವಡಲ ಬಗೆದು ಕರುಳ ಮಾಲೆಯ ಪಿಡಿದು ಧರಿಸುತ ವಡನೆ ಭಕ್ತನ ಬಿಡದೆ ಸಲಹಿದ ಕಡು ದಯಾನಿಧೆ 1 ಪಿತನ ತೊಡೆಯಿಂದ ಭೂಪತಿಸತಿ ನೂಕಲು ಅತಿಭಯದಲಿ ಧ್ರುವ ಖತಿಗೊಳ್ಳುತ ಪತಿತ ಪಾವನ ನಿನ್ನ ಕಾಣಲು ಮುನಿ ಪತಿಯು ಪೇಳಿದ ಪಥದಿ ಪುಡುಕೆ ಅತಿಶಯದಿ ಬಂದ್ಹಿತವ ಕೋರಿದ ಗುಣಾನ್ವಿತ ದಯಾಂಬುಧೆ2 ಕರಿ ಮೊರೆಯಿಡೆ ಸಿರಿಗ್ಹೇಳದಲೆ ಬಂದು ಗರುಡ ಗಮನನಾಗಿ ತ್ವರಿತದಿಂದ ಶರಣಪಾಲಕ ನಿನ್ನ ಚಕ್ರದಿ ತರಿದು ನಕ್ರ ನಕರಿಯ ಪೊರೆದ ತೆರದೊಳೆನ್ನ ವಗುಣಗಳೆಣಿಸದೆ ಹರುಷದಲಿ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬಿಡೆ ನಿನ್ನ ಪಾದವ ಬಿಂಕವಿದೇಕೋಕೊಡುವುದೊ ಅಭೀಷ್ಟವ ಕೋಪವಿದೇಕೋ ಪನೀರೊಳು ಪೊಕ್ಕರು ನಿನ್ನನು ಬಿಡೆ ಬೆನ್ನಭಾರವ ಪೊತ್ತಿಹೆನೆಂದರು ಬಿಡೆನೋ ||ಕೋರೆಯ ತೋರಿಸಿ ಕೊಸರಿಕೊಂಡರು ಬಿಡೆಘೋರರೂಪವ ತೋರಿ ಘುಡುಘುಡಿಸಲು ಬಿಡೆ1ತಿರುಕನೆಂದರು ಬಿಡೆ ತರೆದ ತಾಯ್ಕೊರಳಕೊರೆಕನೆಂದರು ಬಿಡೆ ಅವನಿಯೊಳು ||ಕರಕರೆಗಾರದೆ ಕಾಡ ಸೇರಲು ಬಿಡೆದುರಳ ಮಡುವಿನಲ್ಲಿ ಧುಮುಕಿದರೂ ಬಿಡೆ 2ಕಡು ಬತ್ತಲೆ ಕೈಲಿ ಕಾಸಿಲ್ಲೆಂದರು ಬಿಡೆಒಡನೆ ತೇಜಿಯನೇರಿ ಓಡಲು ಬಿಡೆನೋ ||ಒಡೆಯಪುರಂದರವಿಠಲನೇ ಎನ್ನಕಡಹಾಯ್ಸುವಭಾರಕರ್ತನು ನೀನೆಂzು3
--------------
ಪುರಂದರದಾಸರು