ವನರುಹಾಕ್ಷೀ ವನಮಾಲಿಂಗೇ ಏನು ಮರುಳಾದೆ ನೀ |
ಅನುದಿನ ತನ್ನ ತನುಮನ ವಚನದಿ ನೆನೆವನ ಪುನರಪಿ
ಜನುಮಕ ತಾರ್ದವನಾ ಪ
ಬಿಡದೇ ವಿಷದಾ ಭರಿತಾದಾಕಾ | ಲೊಡಲಂಗಾ ಮ್ಯಾಲಿಪ್ಪನಾ
ವಡಗೋಡಲುಗೊಗ್ಗು ಮೈಯ್ಯವೆ ಗೂಡದು | ಒಡನೋಡ
ನುಡುಗಿಪಾ ಒಡಲೋಳು ಚರಣಾ | ವಡಮೂಡಿ ಬಂದ |
ಕೋಡಗಲ್ಲೋಲ್ಪಲ್ಲವು | ಘುಡು ಘುಟಿಸುವ ಮಹಾ
ಘೋರರೂಪನವ 1
ಸೃಷ್ಟಿಲಿ ಮಾವನುದರೋಳು | ತ್ಕುಂಠವಗ್ನಿಯ ನಿಟ್ಟನು |
ಲುಟುಲುಟು ನಡೆದಾಡುತಲಿಹ ಗುಜ್ಜನು | ಥಟನೆಟ ನಿಳಹಿದ
ಕಪಿ ಸಂಗತಿರುಗಿದಾ
ಮಟಮಟ ಬೆಣ್ಣಿಯ ಕದ್ದುಮೆಲ್ಲುವನಾ2
ದೆಶೆಗಳ್ಗೆ ಪಾರ್ವಕ್ಕಿಯ ಹರುಷಲೇರಿ ಮೆರೆವನಾ |
ಸುದತಿ ವೃತವಳಿದನು ಹಿಸದಸುಯವನರ |
ತರಿದಿ ನಿರ್ದಯದೀ | ಪಸರಿಸುತಿಹ ಕಾರ್ಮುಗಿಲ ಬಣ್ಣದ|
ಲೆಶೆವನು ಮಹೀಪತಿ ನಂದ - ನೊಡಯನು 3