ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿದಾಡೊ ರಂಗ ನಲಿದಾಡೊ ಪ. ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ. ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1 ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2 ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3
--------------
ವಾದಿರಾಜ
ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |ಎಂದಪ್ಪಿಕೊಂಬೆ........................... ಪಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪಅರಳೆಲೆಮಾಗಾಯಿ ಕೊರಳ ಪದಕ ಸರ |ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1ಅಂದುಗೆಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |ಚೆಂದದಿ ಕುಣಿವ ಮುಕುಂದನ ಚರಣವ................ 2ಹೊನ್ನಿನ ಉಡುದಾರ ರನ್ನದ ಚೌಕುಳಿ |ಚಿನ್ನದುಂಗುರವಿಟ್ಟಜಾಹ್ನವಿಜನಕನ.......................3ಅಪ್ಪಣ್ಣ ಭಾಗವತನ ರೂಪವು ತಾನಾಗಿ |ತುಪ್ಪದ ಬಿಂದಿಗೆ ತಂದ ವಿಠಲನ...................... 4ಪರಿಪರಿ ಭಕುತರ ಮರೆಯದೆ ಸಲಹುವ |ಪುರಂದರವಿಠಲನ ಸಿರಿಪಾದ ಪದುಮನ 5
--------------
ಪುರಂದರದಾಸರು
ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ ಪಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪಸಲಿಲಜೋದ್ಬವನವದನನಿಲಯಳೇಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |ತಳಿರ ಪೋಲುವ ದಿವ್ಯಪಾದ| ಚೆಲ್ವಪೆಂಡೆಯ ಭೇದ ||ನಲಿವಯುಗಳಜಂಘೆ| ಜಲಗುಳ್ಳೆಯಂತೆಜಾನು|ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ 1ದಿನಕರಕೋಟಿ ತೇಜದಿ ಹೊಳೆವ ಅನುಪಮವಾದ |ಕನಕವಸನದಿಂದಲಿ ಎಸೆವ | ಘನವಾದ ಜಘನಗ-ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||ತನು ಜಠರವುಜಾಹ್ನವಿಸುಳಿನಾಭಿಯು |ಘನಸ್ತನಯುಗಳ ಚಂದನಲೇಪಿತಳೆ 2ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |ಸೊಂಡಿಲಿನಂತೆ ಭುಜದಭಾರನಡೆವ ಒಯ್ಯಾರ ||ಮಂಡಿತವಾದ ಕಂಕಣ ತೋಳ್ಬಳೆಗಳು |ದುಂಡು ಹವಳ ಕೈಕಟ್ಟುಳ್ಳವಳೆ 3ನಸುನಗು ಮುಖವು ನಾಸಾಭರಣ | ಎಸೆವಕಪೋಲ|ಹೊಸಕುಂಡಲಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||ಶಶಿಸೂರ್ಯರ ಆಭರಣ ಸುಶೋಭಿತೆ |ಕುಸುಮಮುಡಿದ ಮೂರ್ಧಜವುಳ್ಳವಳೇ4ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |ಹಿಂಗದೆ ಭಕ್ತರ ಸಲಹುವಭಾರ| ಕಂಗಳ ಮನೋಹರ ||ರಂಗಪುರಂದರವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ 5
--------------
ಪುರಂದರದಾಸರು
ಬಂದನೇನೆ-ರಂಗ-ಬಂದನೇನೆ-ಎನ್ನ |ತಂದೆ ಬಾಲಕೃಷ್ಣ ನವನೀತಚೋರ ಪಘಿಲುಘಿಲು ಘಿಲುರೆಂಬ ಪೊನ್ನಂದುಗೆ ಗೆಜ್ಜೆ |ಹೊಳೆಹೊಳೆಯುವಪಾದಊರುತಲಿ ||ನಲಿನಲಿದಾಡುವ ಉಂಗುರ ಅರಳೆಲೆಥಳಥಳ ಹೊಳೆಯುತ ಶ್ರೀಕೃಷ್ಣ 1ಕಿಣಿಕಿಣಿಕಿಣಿಯೆಂಬ ಕರದ ಕಂಕಣ ಬಳೆ |ಝಣಝಣಝಣರೆಂಬ ನಡುವಿನ ಗಂಟೆ ||ಗಣಗಣಗಣಯೆಂಬ ಪಾದದ ತೊಡವಿನ |ಕುಣಿಕುಣಿಕುಣಿದಾಡುತ ಶ್ರೀಕೃಷ್ಣ 2ಹಿಡಿಹಿಡಿಹಿಡಿಯೆಂದು ಪುರಂದರವಿಠಲನ |ದುಡುದುಡುದುಡುದುಡು ಓಡುತ ||ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು |ಬಿಡಿಬಿಡಿ ದಮ್ಮಯ್ಯ ಎನ್ನತಲಿ 3
--------------
ಪುರಂದರದಾಸರು