ರಮಾಸಮುದ್ರನ ಕುಮಾರಿ ನಿನ್ನಸರಿ
ಸಮಾನರ್ಯಾರಮ್ಮ ಪ
ಉಮೇಶ ಮೊದಲಾದ ಅಮರ ನಿಕರವು
ಪಾದ ಕಮಲ ಭಜಿಪುದು ಅ.ಪ
ಕರುಣಾವಾರಿಧಿಯೆಂದು ಶರಣ ಜನರು ನಿನ್ನ
ಸ್ಮರಣೆ ಮಾಡುತ ಲಿಪ್ಪರೆ
ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ
ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1
ಅಪಾರ ಮಹಿಮನ ವ್ಯಾಪಾರಗಳ ತಿಳಿದು
ಕಾಪಾಡುವೇ ಜಗವಾ
ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ
ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2
ವಾಸವ ವಂದಿತ ಸಿರಿಶೇಷವಿಠ್ಠಲನೊಳು
ವಾಸವ ಮಾಡುವಳೆ
ಘಾಸೀ ಮಾಡದೆ ಎನ್ನ ಈ ಸಮಯದೊಳು
ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3