ಎಂಥಾ ಮಹಿಮನಿವನೆ ಗೋಪಾಲಕೃಷ್ಣ
ಎಂಥ ಮಹಿಮನಿವನೆ ಪ.
ಎಂಥಾ ಮಹಿಮನಿವನಂತ ಕಂಡವರಿಲ್ಲ
ಕಂತು ಜನಕ ಸರ್ವರಂತರಂಗದೊಳಿಪ್ಪ ಅ.ಪ.
ಕರಚರಣಗಳಿಲ್ಲದೆ ಇದ್ದರು | ಮುದುರಿ
ಘುರುಘುರುಗುಟ್ಟುತಿಹುದೆ
ವರಕಂಬೋದ್ಭವ ವಟು ಪರಿಶು | ಧರಿಸಿರುವನ
ಚರಿಸಿ ಮಾವನ ಕೊಂದ ನಿರ್ವಾಣ ಹಯವೇರಿ
ಶರಧಿಯೊಳಾಡಿ ಗಿರಿಯಡಿ ಓಡಿ
ಧರೆಯನು ತೋಡಿ ಕರಳೀಡ್ಯಾಡಿ
ಕರವ ನೀಡಿ ಭಾರ್ಗವ ದಶರಥ ಸುತ
ಅಂಬರ ತೊರೆದ ರಾವುತ 1
ಮಂದರ | ಬೆಂಡಂತೆ ಧರಿಸಿ
ವನಿತೆಯ ತಂದನೀ ಧೀರ
ಘನಘರ್ಜನೆಯು ಗಂಗಾಜನಕ | ಜಮದಗ್ನಿಸುತ
ವನಚಾರಿ ತುರುಪಾಲ ವನಿತೆರೊಂಚಕ ಕಲ್ಕಿ
ಜನಿಸಿ ಜಲದಿ ಬೆನ್ನಲಿ ಗಿರಿಕೋರೆ
ಘನ ಹೊಸಲಾಸನ ತಿರಿದನುಜನ
ತರಿದ ಮಾತೆ ಕಪಿವೆರಸಿ ವೃಂದಾವನ
ಚರಿಸಿ ದಿಗಂಬರ ಹರಿ ಏರಿದನೆ 2
ಸುತನಿಗಾಗಮವಿತ್ತನೆ | ಕ್ಷಿತಿಧರಧಾರಿ
ಸುತನ ಮೂಗಿನೊಳ್ ಬಂದನೆ
ಸುತವಾಕ್ಯ ಸತ್ಯವೆನಿಸಿ ಅತಿ ಕುಬ್ಜ ಕ್ಷಿತಿಯನಿತ್ತು
ವ್ರತಧಾರಿ ವಸನ ಚೋರ ವ್ರತಭಂಗ ಏರಿ ತುರಂಗ
ಸತಿಯನೆ ಪೊರೆದ ಸತಿಯಂತಾದ
ಸತಿಯಳ ಸಂಗ ಸತಿಗರಿದಂಗ
ಸತಿಯ ಬೇಡಿ ನೀಡಿ ಸತಿಯ ಕೂಡಿ ಜಾರ
ಸತಿ ಹೆಗಲೇರಿದ 3
ವಾಸ ಜಲದಿ ಮೈ ಚಿಪ್ಪು | ಯಜ್ಞ ಸ್ವರೂಪ
ಮಾನವ ಮೃಗರೂಪು
ಆಸೆಬಡಕ ಮಾತೆ ದ್ವೇಷ ವನದಿ ವಾಸ
ಪೋಷ ಪಾಂಡವ ಜಿನ ಮೋಸ ವಾಜಿ ಮೇಲ್ವಾಸ
ನಾಸಿಕ ಶೃಂಗ ನಗಪೋತ್ತಂಗÀ
ಮಾನವ ಸಿಂಗ
ನೃಪರ ದ್ವೇಷ ಪೋಷಿ ಯಜ್ಞವೃಂದ
ವಾಸಿ ಘಾಸಿವ್ರತ ಕಲಿಮುಖ ದ್ವೇಷಿ 4
ಅಮೃತ ಭೂಸತಿಯ ಪೊರೆದು
ಪಾಪಿ ಕರುಳ್ಬಗೆದ ಜಲಪಿತ
ಭೂಪರ ಕಾಡಿ ರಘುಭೂಪ ಸೋದರತಾಪ
ಗೋಪ್ಯಕಲ್ಯಂತಕಾಲ ಗೋಪಾಲಕೃಷ್ಣವಿಠ್ಠಲ
ಆಪಜವಾಸ ಆ ಪೃಥ್ವೀಶ
ಆ ಪುತ್ರಪೋಷ ಆ ಪದ ಸರಿತ
ಕೋಪಿ ಲಂಕೆ ಪುರತಾಪಿ ಗೋಪಿಕಾ
ವ್ಯಾಪಿ ಮಾನಹೀನ ಘೋಟಕವಹನ 5