ಯಾತರ ಭಯ ಶ್ರೀನಾಥನ ಪರಮ ಸುಪ್ರೀತಿಯ ಪಡೆದವಗೆ ಪ
ವಿಧಿ ನಿಜಸುಖದಾತ ನೆಂದರಿತವಗೆ ಅ.ಪ
ಬಂಧು ಜನರು ತನಗೊಂದಿಸಿದಾಕ್ಷಣ ಬಂದ ಭಾಗ್ಯವೇನೊ
ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ
ಮಂದಿರದಲಿ ತಂದಿಟ್ಟಿರುವವಗೆ 1
ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋ
ಅಶನಾಚ್ಛಾದನ ತರಲಿಲ್ಲವೆನುತಲಿ ವ್ಯಸನ ಪಡುವುದೇನೊ
ವಸುದೇವನಸುತನೊಶದೊಳಗಿರುವವಗೆ 2
ಘಾಸಿಯಿಂದಲಾಯಾಸ ಪಡುತ ಅವಾಸದೊಳಿದ್ದೇನೋ
ಕಾಶಿ ಕಂಚಿ ಕಾಳಹಸ್ತಿ ಮೊದಲಾದ ದೇಶ ತಿರುಗಲೇನೋ
ಸಂತೋಷದಲ್ಲಿರುವವನಿಗೆ 3