ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ ಕಡಲಶಯನೆಚ್ಚರ ಗಳದೆಲ್ಲಾ | ಬಿಡದೇ ನಿನ್ನ ನೀ ಮರೆವುದು ಸಲ್ಲಾ | ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ | ಪಡಿ ನಿಜಗತಿಯಾ 1 ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ | ನ್ನೇಸು ಜನ್ಮವ ತಾಳಬೇಕು ಮುಂದ | ಹೇಸಲಿಲ್ಲವನೊಂದು ಘಾಸಿಯಿಂದ | ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ | ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ 2 ಎಂತು ಹೇಳಲಿನ್ನು ಮನವೇ ನಾನು | ಸಾಧು | ಸಂತರ ಸಂಗದಿ ಬಾಳು ನೀನು | ಅಂತರಂಗದಿ ಹರಿ ಮೂಡುವನು | ಹಿತಾಹಿತ ನರಿತು ಸುಮತಿಯಲಿ ಗುರು ಮಹೀ | ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತರ ಭಯ ಶ್ರೀನಾಥನ ಪರಮ ಸುಪ್ರೀತಿಯ ಪಡೆದವಗೆ ಪ ವಿಧಿ ನಿಜಸುಖದಾತ ನೆಂದರಿತವಗೆ ಅ.ಪ ಬಂಧು ಜನರು ತನಗೊಂದಿಸಿದಾಕ್ಷಣ ಬಂದ ಭಾಗ್ಯವೇನೊ ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ ಮಂದಿರದಲಿ ತಂದಿಟ್ಟಿರುವವಗೆ 1 ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋ ಅಶನಾಚ್ಛಾದನ ತರಲಿಲ್ಲವೆನುತಲಿ ವ್ಯಸನ ಪಡುವುದೇನೊ ವಸುದೇವನಸುತನೊಶದೊಳಗಿರುವವಗೆ 2 ಘಾಸಿಯಿಂದಲಾಯಾಸ ಪಡುತ ಅವಾಸದೊಳಿದ್ದೇನೋ ಕಾಶಿ ಕಂಚಿ ಕಾಳಹಸ್ತಿ ಮೊದಲಾದ ದೇಶ ತಿರುಗಲೇನೋ ಸಂತೋಷದಲ್ಲಿರುವವನಿಗೆ 3
--------------
ಜಗನ್ನಾಥದಾಸರು
ಹಣವೆನಲು ಹಣವಲ್ಲ ಹಣವಿಲ್ಲದವರಿಲ್ಲ ಪ ಗಣಿಸಲು ಮಹಾತ್ಮರೆ ಹಣವಂತರಯ್ಯ ಅ.ಪ ಹಣವು ವಿದ್ಯೆಯು ತಪಸು ಊಂಛ ವೃತ್ತಿಗಳು ಬ್ರಾ- ಹ್ಮಣಗೆ ಕ್ಷತ್ರಿಯರಿಂಗೆ ಶೌರ್ಯಾದಿಗಳ್ ಘನಚಮತ್ಕøತಿ ಯುಕ್ತಿಗಳು ವೈಶ್ಯರಿಗೆ ಶೂದ್ರ ಜನಕೆ ಭೂಪರಿಚರ್ಯ ಕೃಷ್ಯಾದಿಗಳೆ ಹಣವು 1 ಸಟೆ ಕಪಟ ಬಾಯಬಡುಕತನ ತಸ್ಕರ ಅಧರ್ಮಗಳಿಂದಲಿ ಘಾಸಿಯಿಂ ಗಳಿಸಿರುವ ಲೇಶವಾದರು ಪುಣ್ಯ- ರಾಶಿಯನು ಕೆಡಿಸದೇ ಲೇಸು ಮಾಡುವದೇ 2 ಅತ್ಯಾಸೆ ಪಿಶುನತೆಯು ತಾಮಸರಿಗೆ ಸತ್ಯ ಸಂಕಲ್ಪ ಗುರುರಾಮ ವಿಠಲನ ಸ- ರ್ವತ್ರ ಚಿಂತಿಸುವವಗೆ ಕೈತುಂಬ ಹಣವೂ 3
--------------
ಗುರುರಾಮವಿಠಲ