ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠಲ ಓಡಿ ಬಾರೊ ತೊಟ್ಟಿಲನೇರೊ ಪುಟ್ಟ ಕಮಲದಂಥ ಬಟ್ಟ ಮುಖವ ತೋರೊ ಪ. ಜಟ್ಟಿಯಂದದಿ ಭುಜ ತಟ್ಟಿ ಹುಂಕರಿಸುತ ಅ- ರಿಷ್ಟ ವೃಷಭನನ್ನು ಮೆಟ್ಟಿ ಮಡುಹಿದಂಥ 1 ಹೇಷಿಕ ಭೀಷಣ ಕೇಶಿಯಂಬಸುರನ ಘಾಸಿಮಾಡಿದ ತೋಳ ಬೀಸುತ ಭರದಿಂದ 2 ಮಂದಹಾಸದಿ ಶರದಿಂದು ಕಾಂತಿಯ ಗೆಲ್ವ ಸುಂದರ ಮುಖ ಪೂರ್ಣಾನಂದ ಗೋಪಿಯ ತಂದ 3 ಮೀಸಲ ನೊರೆಹಾಲ ಕಾಸಿ ಸಕ್ಕರೆ ಕೂಡಿ ವಾಸ ಚೂರ್ಣವನಿಕ್ಕಿ ಶ್ರೀಶನಿನ್ನೊಶಕೀವೆ 4 ನಿತ್ಯ ಸುಖಾಂಬುಧೆ ನಿರವಧಿ ಫಲದ ಸ- ರ್ವೋತ್ತಮ ಶೇಷಾದ್ರಿ ಶಿಖರೀಶ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ವ್ಯಾಸರಾಯ ನಿನ್ನ ಅನುದಿನಾ | ಸ್ಮರಿಪ ಜನಕೆತೋಷದಿಂದ ಲೀವೆ ಸಾಧನಾ |ವಾಸುದೇವ ಕೃಷ್ಣಲೀಲೆ | ರಾಶಿಗುಣವ ಬೋಧಿಸುತ್ತಶ್ರೀಶ ಪಾದಪದುಮ ಕಾಂಬ | ಲೇಸು ಮುಕ್ತಿ ಮಾರ್ಗತೋರ್ವೆ ಅ.ಪ. ಏಸೊ ಮುನಿಗಳಿದ್ದು ಮಾಡದಾ | ಶಾಸ್ತ್ರವೆಂಬ ಭೂಷಣಂಗಳ್ಹರಿಗೆ ತೊಡಿಸಿದಾ |ಕೇಶವನೆ ಸರ್ವೋತ್ತಮನು | ದೋಷದೂರನೆಂದು ತಿಳಿಸಿಮೋಸಪಡಿಪ ಮಾಯಿ ಮತವ | ಘಾಸಿಮಾಡಿ ಜಯವ ಪಡೆದೆ 1 ವಾಸುದೇವ ವಾಲೀಲೆಯಏಸೊ ವಾದಿ ಜಯದ ಪತ್ರ | ಭೂಷಣಗಳ್ ಶ್ರೀಶಗಿತ್ತೆ 2 ಶೇಷನಾವೇಶದಿಂದಲಿ | ಪುಟ್ಟಿ ನೀವುವ್ಯಾಸರಾಯರೆಂಬ ಪೆಸರಲಿ |ದೇಶ ಪತಿಗೆ ಬಂದ ಕುಹು | ದೋಷಯೋಗ ಹರಿಸುತ ಸಿಂಹಾಸನೇರಿ ಜಗದಿ ಬಹಳ | ಭಾಸುರ ಸುಕೀರ್ತಿ ಪಡೆದೆ 3 ನ್ಯಾಯ ಗ್ರಂಥವೆಂದು ಕರೆಸಿಹ | ಚಂದ್ರಿಕಾದಿನ್ಯಾಯಾ ಮೃತವು ತರ್ಕ ತಾಂಡವ |ಗೇಯದಿಂದ ತುಚ್ಛ ಭಾಷ್ಯ | ಗಾಯನ ಮಾಡ್ದದುರ್ಮತೆನ್ನ ಮಾಯಿಮತವ ಗೆದ್ದು ಮಧ್ವ | ಧೇಯ ಸಾಧಿಸೀದ ಗುರುವೆ 4 ಪರಮ ಶಿಷ್ಯರೆಂದು ಮೆರೆವರಾ | ವಿಜಯಿಂದ್ರವರ ಸುವಾದಿರಾಜರೆಂಬರಾ |ಗುರುಗಳಾಗಿ ಯತಿ ಸುರೇಂದ್ರ | ವರ ಸುಪುತ್ರ ಭಕ್ಷೆ ಬೇಡೆಪರಮ ಹರುಷದಿಂದ ವಿಜಯ | ಇಂದ್ರರನ್ನ ಕಳುಹಿ ಪೊರೆದೆ 5 ಜ್ಞಾನಿಯರಸ ವ್ಯಾಸ ಮುನಿಗಳಾ | ಮನುಜರೆಂದುಹೀನ ಜನರು ಪೇಳೆ ಆವರ್ಗಳಾ |ಭಾನುಸೂನು ನರಕ$ನೇಕ | ಕಾಣಿಸುತ್ತ ಹಿಂಸಿಸೂವಶ್ರೀನಿವಾಸ ಹರಿಯ ಮುಂದೆ | ಗಾನ ಗೈದು ಆಡುತಲಿಪ್ಪ 6 ಪರಮಹಂಸ ಮುನಿಯು ಮನದಲಿ | ಪೂಜೆಗೈದುಹರಿಯ ಕಾಂಬ ಹೃದಯ ಗುಹೆಯಲಿ |ಗುರುವರ ಬ್ರಹ್ಮಣ್ಯ ಪೂಜ್ಯ | ಗುರು ಗೋವಿಂದ ವಿಠ್ಠಲಾನಚರಣ ವನಜ ಧ್ಯಾನಾಸಕ್ತ | ವರ ಸುನವ ವೃಂದಾವನಸ್ಥ 7
--------------
ಗುರುಗೋವಿಂದವಿಠಲರು
ಏಳು ಶ್ರೀ ಗುರುರಾಯ ಬೆಳಗಾಯಿತಿಂದುಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.ಏಳುಗುರುರಾಘವೇಂದ್ರ ಏಳು ದಯಾಗುಣಸಾಂದ್ರಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.ಅಶನವಸನಗಳಿಲ್ಲವೆಂಬವ್ಯಸನಗಳಿಲ್ಲಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ 1ನಾನು ನನ್ನದು ಎಂದು ಹೀನಮನಸಿಗೆ ತಂದುಏನು ಮಾಡುವಕರ್ಮನಾನೆ ಅಹುದೆಂದುಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದುನೀನೆ ಉದ್ಧರಿಸಯ್ಯ ದೀನ ದಯಾಸಿಂಧು 2ಅನ್ಯರ ಕೈಯಲ್ಲಿ ನಿನ್ನವರನಿರಿಸುವುದುಅನ್ಯಾಯವಾಯ್ತುಪಾವನ್ನಗುರುರಾಯಎನ್ನ ಮಾತಲ್ಲವಿದು ನಿನ್ನ ಮಾತೇ ಸರಿಮನ್ನಿಸಿ ಆಗು ಪ್ರಸನ್ನ ಗುರುರಾಯ 3ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲಭೇದಾಭೇದವನು ತಿಳಿಯಲಿಲ್ಲಸಾಧು ಸಜ್ಜನರ ಸಹವಾಸ ಮೊದಲಿಲ್ಲಹಿಂದಾಗಿಮಾನಮಾರಿಸಿದಿ ಉಳಿಸಲಿಲ್ಲ4ಆಸೆಗೊಳಗಾದೆನೊ ಹೇಸಿ ಮನುಜನು ನಾನುಕ್ಲೇಶಭವಸಾಗರದೊಳೀಸುತಿಹೆನೊಏಸುಜನ್ಮದಿ ಎನ್ನಘಾಸಿಮಾಡಿದೆ ಮುನ್ನದಾಸನಾಗುವೆ ತೋರೊ ಪ್ರಸನ್ನವೆಂಕಟನ 5
--------------
ಪ್ರಸನ್ನವೆಂಕಟದಾಸರು