ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ ಇಂಥಾ ಗುರುಗಳನೆಂದು ಕಾಣೆನಾ ನಂತ ಚೇತನರಂತರ ಬಹಿರದಿ ನಿಂತು ಕರ್ಮವವರಂತೆ ಮಾಳ್ಪಾ - ನಂತ ಮಹಿಮಾನಂತನಾಂಶಜರಿಂಥಾಅ.ಪ ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ ತುಂಗ ವಿಕÀ್ರಮ ಜಗದೀಶಾ ಶ್ರೀಹರಿ ದಾಸಾ ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ - ಪಾಂಗ ಯತಿಕುಲೋತ್ತುಂಗ ಮಾಯಿ ಮಾ - ತಂಗ ಸಂಘಕೆ ಸಿಂಗ ದುಷ್ಟ ಭು - ವಿಹಂಗ ಸ್ವಮತೋ - ಭೃಂಗ ಮನ್ಮನೋ - ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ ಕಂಗಳಿಗೆ ತಾವು ಕಂಗೊಳಿಪರಿಂಥಾ 1 ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ ಭೇಧಮತವನೆ ಸಾಧಿಸೀ ವಾದದಿ ಜೈಸಿ ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ ಭೋಧಿಸಿ ತತ್ತ್ವವ ಭೇಧಿಸಿ ಪರಮತ ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ ಹಾದಿಯ ಹಿಡಿಸಿ - ಮೋದಕೊಡುವ ಪಂಚ ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ ಶೋಧಿಸಿ ಜನಮನೋ ಖೇದಗೊಳಿಪ ಭ - ವೋಧಧಿ ದಾಟಿಸಿ ಶ್ರೀದÀನ ತೆರದಲಿ ಮೇದಿನಿಯಾಳುವರಿಂಥಾ 2 ಧಿಟ್ಟ ಗುರು ಜಗನ್ನಾಥ ವಿಠಲದೂತಾ ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ ಶಿಷ್ಟಜನರನುತ್ನøಷ್ಟದಿ ಪಾಲಿಪ ಎಷ್ಟು ಪೇಳುವುದೋ ಉತ್ಕøಷ್ಟನ ಗುಣಗಳ ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ - ಳೆಷ್ಟು ಪೇಳಲವಶಿಷ್ಟವೆನಿಪವೋ ದೃಷ್ಟಿಹೀನರಿಗೆ ದೃಷ್ಟಿ ನೀಡುವ ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ 3
--------------
ಗುರುಜಗನ್ನಾಥದಾಸರು
ಪಾಲಿಸು ಅವಾಂತರೇಶಾ ಪಾವನ ಕೋಶಾ ಪಾಲಾಬ್ದಿ ಶಯನನ ದಾಸಾ ಕಾಲ ಜನಕ ವಿಶಾಲಮಹಿಮಾರೈಯಿ ಲೋಲಾ ಜೀವೋತ್ತಮ ಕಾಲಕಾಲಕೆ ಎನ್ನ ಪ ಪುಣ್ಯಗಾತುರ ಮಾರುತಾ ಪುಂಜಿತ ಜೀವಾ ಗಣ್ಯರಹಿತ ಗುಣಜಾತಾ ಮನ್ಯುದಾನವ ಕುಲಘಾತಾ ಮಹಾತತ್ವ ದಾತಾ ಸನ್ನ್ಯಾಯಮಣಿ ಶ್ರುತಿಗೀತಾ ಧನ್ಯನ ಮಾಡೊ ಅನ್ಯನೇನೊ ನಾನು ಕಾ ರುಣ್ಯದಿ ದುರಿತಾರಣ್ಯ ಮನ್ಮಥ ಲಾ ಗುಣ್ಯ ಮನದಾ ಕಾರ್ಪಣ್ಯವ ಓಡಿಸಿ 1 ದ್ವಿತೀಯ ನಿರ್ಜರವರೇಣ್ಯ ದೀನನುಗಣ್ಯ ದಿತಿಜಾವಳಿಗೆ ಕಾಠಿಣ್ಯ ಸತತ ಅಪ್ರತಿರಾಜ್ಯನ್ಯಾಸ ಚರಾಚರಮಾನ್ಯಾ ತುತಿಸುವೆ ಕೇಳು ದೈನ್ಯ ಗತಿ ನೀನೆ ಕ್ಷಿತಿಯೊಳಗಿತರರ ಕಾಣೆನೊ ಸತಿಪತಿ ಮಿಗಿಲಾದ ತುತುವೇಶ ತತಿಗಳ ಜಿತ ಸದ್ಗುರು ಭಾರಿತ ಪ್ರತಿಪಾದ್ಯ ಮಾರುತಿ ಮತಿಯಲಿ ನಿನ್ನ ಮತದಲಿ ಪೊಂದಿಸಿ 2 ವಿಕಸಿತ ಸದನಾ ಜ್ಞಾನ ವಿಶೇಷ ಧ್ಯಾನಾ ಅಖಿಳ ವಿಚಾರ ನಿದಾನಾ ಅಕಳಂಕವಾದ ಬಹುಮಾನಾ ಅಮೃತಪ್ರಾಣಾ ಸಕಲಕ್ಕು ನೀನೇ ಪವಮಾನಾ ಸುಖಸಾಗರ ಸುರನಿಕರವಿನುತ ಮಹಾ ಭಕುತ ಭವಾಬ್ಧಿತಾರಕ ವಿಷಭಂಜನ ಲಕುಮಿವಲ್ಲಭ ನಮ್ಮ ವಿಜಯವಿಠ್ಠಲನ್ನ ನಖ ಕೊನೆ ಪೊಗಳುವ ಉಕುತಿ ನೀಡಿಂದು 3
--------------
ವಿಜಯದಾಸ
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ | ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪ ಪುರುಹೂತ ಜಾತ ಸೂತ | ಸರಸಿಜ ತಾತಾ | ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ ಚರಣವ ನಿರುತರ ನೆರೆನಂಬಿದೆ | ದು ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ 1 ಮೂರ್ತಿ ವರದೇಶಾ ಶರಣರ ಪರಿತೋಷಾ | ತರತಮ್ಯ ಜ್ಞಾನ ಕೋಶ | ಹಹ | ಪುರಹರಗೀಕಾಶಿಪುರ ಕರುಣಿಸಿದ ಸುಂ | ದರಗಾತುರ ಗೋತುರ ಧರ ಧರಣೀಶಾ 2 ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ | ಅವಿಕಾರ ನಾನಾ ವೇಷಾ | ರವಿಜವನ ಪೊರೆವ ಮಿರುವ ಮಹಸತ್ಕಥಾ ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ 3
--------------
ವಿಜಯದಾಸ