ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ
ಜಲಜಾಂಬ ನೀನಲಸದೆ ಎನ್ನನು ಅ.ಪ
ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ
ಘಾತವು ಹೆಚ್ಚಿದ ಸೇರುವ ನೋಡಿ 1
ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ
ಕೇಶರಂಧ್ರವಕಾಶದೊಳೂಧ್ರ್ವ ಬಲು
ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2
ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ
ನೋಯುತ ದೇಹದೊಳಾಯಾಸ ಹೆಚ್ಚಿತು 3
ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ
ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4
ಅನ್ನವರೋಚಕವು ಅಪ್ತರೊಳನ್ಯತೆಗೋಚರವು
ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5
ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ
ಭವ ರೋಗ ವೈದ್ಯ ನೀನೇಗತಿಯೆಂದಿಗು 6
ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ
ವರದವಿಠಲದೊರೆ ವರದದಯಾನಿಧೆ7