ಒಟ್ಟು 661 ಕಡೆಗಳಲ್ಲಿ , 94 ದಾಸರು , 485 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಕರುಣ ಸಾಗರ ಗುರುವೆಕಾರುಣ್ಯ ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದುಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ ಜ್ಞಾನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಜ್ಞಾನದ ಹಾದಿಯಿಲ್ಲ ಅ-ಜ್ಞಾನಿ ನಾನಾದೆ ಸ್ವಾನುಭವವೆಂದರೆ ಏನೋ ಎಂತೋಜ್ಞಾನವೆಂದರೆ ದೀಪ ಬೆಳಕಿಲಿ ನೋಡಿಪ್ಪಜ್ಞಾನದ ಸ್ವರೂಪ ಸಾರ ಗುಹ್ಯ ಜ್ಞಾನಿ ಸಂಗದ ಗೋಷ್ಟಿಜ್ಞಾನಿಗೇ ಪರಿಪಾಟಿಜ್ಞಾನಿಯೆಂದರೆ ಕೋಟಿ ಕೋಟಿ ಪುಣ್ಯ ಜ್ಞಾನಕ್ಕೆ ಸರಿಯಿಲ್ಲಜ್ಞಾನಿಯಾದವ ಬಲ್ಲಜ್ಞಾನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟುಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಟಕಮಕನೆ ನೋಡ್ಯಾಡಿಟಾಳಿ ಬಲಿತು ಕೊಂಡ ಹೊತ್ತರು ಆತ್ಮಜ್ಞಾನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಠಮಕದಲಿ ದಂಭಕಗಠಾವಿಕ್ಯಾಗಲು ಶಿವನುಠಿಸಳ ಮನದವನುಠೀವಿ ಹೊಕ್ಕ ಠುಮಠೂಮಿಗುಟ್ಟುತಲಿಠೇವೇನೆ ಕಳಕೊಂಡಠೈ(ತೈ)ಳ ಬುದ್ಧಿಯ ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತವನಿಧಿಗಳ ನೋಡುತಾರಕ ಬ್ರಹ್ಮನ ಕೂಡುತಿಳಿದವನು ನೀ ನೋಡುತೀಂ(ತಿ)ತಿಣಿಯನು ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡುದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ ಜ್ಞಾನಸ್ಥಾ(ಸ್ಥ)ಳವ ಶುದ್ಧ ಮಾಡುಸ್ಥಿರವಾದ ಮನಸಿನ ಸೂತ್ರವಿಡಿದುಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಪರಮ ಗುರುವಿಗೆ ಶರಣುಪಾಪನಾಶನೆ ಶರಣುಪಿರಿದು ಪರಿಣಾಮದ ದೊರೆಗೆ ಶರಣು ಪೀಠದರಸನೆ ಶರಣುಪುಣ್ಯ ಪುರುಷನೆ ಶರಣುಪೂತ ಪಾವನ ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನುಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟುವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ಶಮದಮಗಳಿಂದಶಾಶ್ವತ ಪದಕೇರಿಶಿವನ ಒಲಿಸಿಕೊಂಡಶೀಲಶುಂಡಶೂರ ನಿರ್ಧಾರ ಬಹು ಮೇಲುಳ್ಳವನುದಾರಶೇರಿ ಬಂದನುಶೈವ ಮಾರ್ಗ ಹೊಂದಿಶೋಭನದ ಮನೆಯಿಂದಶೌ(ಸೌ)ಭಾಗ್ಯವಾಯಿತುಶಂಭು ಶಂಕರ ಶರಣು ಸಹಸ್ರ ಶರಣುಶಃ(ಶ)ರಚಾಪವಿಲ್ಲದೆ ಕಾದಿ ಶರಣನು ಗೆದ್ದ ತಿಮಿರನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ ಜ್ಞಾನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪಪರಮ ಸಾಧು ಹರಹರಾ 31 ಗುರು ತ್ರಿಪುರಾಂತಕನಅರುವಿನ ಪದವಿದುಅರಿತವಗೆ ಅರಿದು ಅಕ್ಷರ ಮಾಲೆಕೊರತೆ ಆದ ಮಾತಿಗೆಹೊರತಾದ ಮಾತುಗಳಮುರುತಾದ ವೇದಗಳು ಗುರು ಗಮ್ಯವುಹಿರಿಯರಿಗೆ ಸಂಬಂಧಪರಕೆ ಪರಮಾನಂದಕರದ ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ಸಿದ್ಧಗುರುತ್ರಿಪುರಾಂತಕ
ಅನುದಿನ ಸಾನುರಾಗದಿ ಸಲಹೋ ವಾನರೋತ್ತಮ ಮಾರುತಿ ಪ ವಾಣಿಯ ಮುದಕೆ ಕ್ಷೋಣಿ ಕುಮುದಕೆÉ ಏಣಿಲಾಂಛನನೆನಿಸಿ ಗಾಣಧಾಳದಿ ತಾಣಗೈದಿಹ ಪ್ರಾಣದೇವನೆ ಅ.ಪ ಯುಗಯುಗದಲಿ ಜನಿಸಿ | ರಘುಕುಲೇಶನ ಸ್ತುತಿಸಿ ವಾರಿಧಿ ಲಂಘಸಿ || ಜಗದ ಜನನಿಗೆ ಕ್ಷೇಮತಿಳುಹಿದ ಒದೆದು ನಗರ ದಹಿಸಿದ | ಸುಗುಣ ನಾಲ್ಮೊಗ ಪದಾರ್ಹನೆ ಮುಗಿವೆ ಕರವನು ಅಘವ ಓಡಿಸಿ 1 ದ್ವಾಪರದಲ್ಲಿ ಬಹುಪಾಪಾತ್ಮಕರಾದ ಭೂಪಾಲರ ಧುರದಿ | ಕೋಪದಿ ಸಂಹರಿಸಿ ಸತಿಮಣಿ ದ್ರೌಪದಿಗೆ ಮುದವಿತ್ತು ಸೇವೆಯನು ಗೋಪತಿ ಶ್ರೀಕೃಷ್ಣ ಸಲಹಿದ ಭಾಪು ಭಾಪು ಪರಾಕ್ರಮಶಾಲಿ 2 ಬಂದು ಈ ಯುಗದಿ ಮಧ್ಯಮಂದೀರಾತ್ಮಜನಾಗಿ ಮಂದರ ಮತವ ಮುರಿದು || ಪರ | ನೆಂದು ವಿಜಯದಿ ದುಂದುಭಿ ಮೊಳಗಿಸಿದ ಕಾರಣ ಗುರುಗಂಧವಾಹನ 3
--------------
ಶಾಮಸುಂದರ ವಿಠಲ
ನಿತ್ಯ ಶುಭ ಪಾದ ಪಾದ ತೀರ್ಥಕ್ಕೆ || ಜಯ || 1 ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2 ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3 ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4 ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5
--------------
ಭೀಮಾಶಂಕರ
ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ ಬೇಡಿದ ಇಷ್ಟ ವರ ನೀಡುವರು ನಮ್ಮ ಯತಿವರ ಪ ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವ ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡು ಮಂತ್ರಾಕ್ಷತೆ ಫಲ ನೀಡಿ ತಾ ಸಂತಾನ ಸಂಪತ್ತು ಕೊಡುವರ 1 ವಾತ ಪಿತ್ತ ವ್ಯಾಧಿಗಳ ಸೇತು (ಶ್ವೇತ?) ಕುಷ್ಠರೋಗಗಳ ಪಾತಕಿಯರ ಪಾಪಗಳ ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ ಭೂತಳದಿ ಸನ್ನೀತ (ಸನ್ನಿಹಿತ?) ರಾದ ಸೀತಾಪತಿ ನಿಜದೂತರೆನಿಸೋರು 2 ಭಜಸÉ ಭಕ್ತರ ನೋಡುವ ಸದನಕೆ ಬಂದುಕೂಡುವ ಒದಗಿದಾಪತ್ತು ದೂಡುವ ಬಂದು ಮುದದಿ ತಾ ದಯಮಾಡುವ ಅಜನಯ್ಯನ ಕೊಂಡಾಡುತ ತುಂಗಾನದಿಯ ತೀರ ವಾಸವಾಗಿ ಹೃದಯದೊಳು ಭೀಮೇಶ ಕೃಷ್ಣನ ಪದವ ಭಜಿಸಿ ಪಡೆವರಾನಂದವ3
--------------
ಹರಪನಹಳ್ಳಿಭೀಮವ್ವ
ರಾಘವೇಂದ್ರ ಯತಿಸಾರ್ವಭೌಮ ದುರಿ ತೌಗಘದೂರ ತೇ ನಮೋ ನಮೋ ಪ ಮಾಗಧರಿಪು ಮತಸಾಗರ ಮೀನ ಮ ಮಾಘ ವಿನಾಶಕ ನಮೋ ನಮೋ ಅ.ಪ. ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ ದಾಗಮಜ್ಞ ತೇ ನಮೋ ನಮೋ ಮೇಘ ಶ್ಯಾಮಲ ರಾಮಾರಾಧಕ ಮೋಘ ಬೋಧತೇ ನಮೋ ನಮೋ 1 ತುಂಗಭದ್ರ ಸುತರಂಗಿಣಿ ತೀರಗ ಮಂಗಳಚರಿತ ಶುಭಾಂಗ ನಮೋ ಇಂಗಿತಜ್ಞ ಕಾಳಿಂಗ ಮರ್ದ ಯದು ಪುಂಗವ ಹೃದಯ ಸುಸಂಗ ನಮೋ ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ ಗಾಂಗೇಯ ಸಮಾಭಾಂಗ ಕುಮತ ಮಾ ತಂಗ ಸಿಂಗ ಶಿತ ಪಿಂಗ ನಮೋ 2 ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ನುತ ವಿಖ್ಯಾತ ನಮೋ ದೇಶಿಕ ವರ ಸಂಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ ಕ್ಲೇಶಿತಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ ವ್ಯಾಸ ರಾಮ ಪದ ಭಕ್ತ ನಮೋ ನಮೋ ಶಾಶ್ವತ ಕರುಣಾಸಕ್ತ ನಮೋ 3 ಮಣಿ ಸಂ ಭಾವಿತ ಮಹಿಮ ಪಾಲಯ ಮಾಂ ಸೇವಾಪರ ಸರ್ವಾರ್ಥಪ್ರದ ವೃಂ ದಾವನ ಮಂದಿರ ಪಾಲಯ ಮಾಂ ಮಾರ್ಗಣ ಭುಜಗ ವಿನಾಯಕ ಭಾವಜ್ಞ ಪ್ರಿಯ ಪಾಲಯ ಮಾಂ ಕೇವಲ ನತಜನ ಪಾವನರೂಪ ಸ ದಾ ವಿನೋದಿ ಹೇ ಪಾಲಯ ಮಾಂ 4 ಸನ್ನುತ ಮಹಿಮ ಜಗನ್ನಾಥ ವಿಠಲ ಸನ್ಹಿತ ಮಾನಸ ಜಯ ಜಯ ಭೋ ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ ಪನ್ನೆ ಭಯಾಪಹ ಜಯ ಜಯ ಭೋ ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ ರುಣ್ಯ ಪ್ರಯೋದಧೆ ಜಯ ಜಯ ಭೋ ಧನ್ಯ ಕ್ಷಮಾಸಂಪನ್ನ ಬುಧಜನ ಶ ರಣ್ಯ ಸದಾರ್ಚಿತ ಜಯ ಜಯ ಭೋ 5
--------------
ಜಗನ್ನಾಥದಾಸರು
ಹರಿಯೆ ನಿನ್ನ ಭಜಿಸುವಂಥ | ಶರಣ ಸಂಗವಾನಿರುತ ಇತ್ತು ಕಾಯೊಯೆನ್ನ | ಅಘವ ಕಳೆಯುವ ಪ ಮೇರುಗಿರಿಯ ಪೋಲ್ವದುರಿತ | ರಾಶಿ ನಿಚಯವಾಸಾರಿ ತೂಲರಾಶಿಗನಳ | ಪರಿಯ ಮಾಡುವಾ |ಸೂರಿ ಜನ ಸಂಗ ಫಲವ | ಪೇಳಲಳವಾತೋರಿ ಪೊರೆ ಅಂಥವರ | ದೇವರ ದೇವಾ 1 ನಿನ್ನ ಸಂಕಲ್ಪಾನುಸಾರ | ನಡೆವ ಭಕ್ತರಮನ್ನುಜರು ಅವರೆಂದು | ತಿಳಿವ ಕುಜನರಇನ್ನ ತನಯ ಶಿಕ್ಷಿಸುವ | ಬಿಡದಲವರಬೆನ್ನು ಹುರಿಯ ಕೀಳಿಸುವ | ಮನ್ಯುಲವರ 2 ಕಾಲ ಕಳೆವಾರೋ 3 ಸತಿಸುತಿರೊಡನೆಯಿದ್ದು | ಮಮತೆ ದೂರರೋಹಿತವು ಅಹಿತವೆರಡು ಸಹಿಸಿ | ನಿನ್ನಿಂದೆಂಬೋರೋ |ಕ್ಷಿತಿಯೊಳುಳ್ಳ ತೀರ್ಥಕ್ಷೇತ್ರ | ಪಾವಿಸುವರೋಗತಿಯು ನೀನೆ ಸತತ ಎಂದು | ಅನ್ಯ ಬಗೆಯಾರೋ 4 ದರ್ವಿಯಂತೆ ಜೀವನೆಂದು | ಅರಿತು ಅನುದಿನದುರ್ವಿಭಾವ್ಯ ವ್ಯಕ್ತಾಅವ್ಯಕ್ತ | ಅನಂತಗುಣಶರ್ವ ವಂದ್ಯನಾದ ಗುರು | ಗೋವಿಂದ ವಿಠಲನಸರ್ವಕಾಲ ತುತಿಸುತ್ತ | ತಿಳಿವರಾಧೀನ 5
--------------
ಗುರುಗೋವಿಂದವಿಠಲರು
ಹರೇ ವೆಂಕಟಶೈಲವಲ್ಲಭಪೊರೆಯಬೇಕು ಎನ್ನಪ ದುರಿತದೂರ ನೀನಲ್ಲದೆ ಧರೆಯೊಳುಪೊರೆವರನ ಕಾಣೆ ನಿನ್ನಾಣೆ ಅ.ಪ. ಆರು ನಿನ್ನ ಹೊರೆತೆನ್ನ ಪೊರೆವರುನೀರಜಾಕ್ಷ ಹರಿಯೆ ಅ-ಪಾರ ಮಹಿಮ ಪುರಾಣ ಪುರುಷಘೋರ ದುರಿತಗಳ ದೂರ ಮಾಡಿಸೋ 1 ಇಂದಿರೇಶ ಅರವಿಂದನಯನ ಎನ್ನತಂದೆ ತಾಯಿ ನೀನೆಹೊಂದಿದವರ ಅಘವೃಂದ ಕಳೆವಮಂದರಾದ್ರಿಧರನೇ ಶ್ರೀಧರನೇ2 ಮಂಗಳಾಂಗ ಮಹನೀಯ ಗುಣಾರ್ಣವಗಂಗೋದಿತ ಪಾದಅಂಗಜಪಿತ ಅಜರಾಜಶಯ್ಯ ಶ್ರೀ-ರಂಗವಿಠ್ಠಲ ದೊರೆಯೇ ಶ್ರೀ ಹರಿಯೇ 3
--------------
ಶ್ರೀಪಾದರಾಜರು
(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
* ಇದೆ ಇದೆ ಉಡುಪಿಪುರ ನಮ್ಮ ಪದುಮನಾಭನು ನೆಲೆಸಿರುವ ಮಂದಿರ ಪ. ಬಂದ ಆಯಾಸಗಳೊಂದು ಕಾಣಿಸದಿನ್ನು ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ ಸುಂದರ ಗೋಪುರ ಅಂದವಾಗಿಹ ಬೀದಿ ಬಂದೆವೆ ಗುರು ಹಿರಿಯರ ಕೃಪೆಯಿಂದ 1 ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ ಅದರ ಬದಿಯಲ್ಲೆ ಕೃಷ್ಣಪುರ ಮಠವು ಅದರೆದರಲ್ಲೆ ಶಿರೂರು ಶ್ರೀಗಳ ಮಠ ಎದುರೆ ಕಾಣುವುದೆ ಕನಕ ಮಂಟಪವು 2 ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ ಕಂಡು ವಂದಿಸಿ ಮಹಾದ್ವಾರಕೆ ಬನ್ನಿ ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ ಕಂಡು ಸಾಗಿರಿ ಮುಂದೆ ಕಾಣೂರು ಮಠವ 3 ಎರಡನೆಯ ಬೀದಿಯಲಿ ಬಲದ ಮಹಾದ್ವಾರ ಗಿರಿಜೆಯರಸ ಚಂದ್ರೇಶ್ವರನ ಗುಡಿ ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ ದರ ಪಕ್ಕವೆ ಪುತ್ತಿಗೆ ಮಠ ನೋಡಿ 4 ಬರಬರುತ ಬೀದಿ ಎರಡು ಪಕ್ಕಗಳಲ್ಲಿ ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್ ನಿರರುತಿ ಕೋಣದಿ ಆದಮಾರು ಮಠ ಅ ದರ ಪಕ್ಕವೆ ಪೇಜಾವರ ಮಠವೆನ್ನಿ 5 ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ ಸುಂದರವಾದ ಪಲಿಮಾರು ಮಠ ಅಂದ ನೋಡುತ ಸಾಗಲರ್ಧ ಪ್ರಥಮ ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ 6 ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ ಅತಿ ಉನ್ನತವಾದ ಗರುಡಸ್ಥಂಭ ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು ಗತಿಸಿ ಪೋದುವು ನಮ್ಮ ಪಾಪರಾಶಿಗಳು 7 ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ ಬಡಿಯುತಲಿಹರು ನಗಾರಿಗಳು ತಡೆಯದೆ ತೆಗೆವರು ಮಹಾದ್ವಾರವೀಗಲೆ ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ 8 ಬೆಳಗು ಝಾವದ ನಾಲ್ಕು ತಾಸಿನ ಭೇರಿಯು ಒಳಗೆ ಪೋಗಿರಿ ಎಂದು ಕೂಗುತಿದೆ ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್ ಚಲುವ ಕೃಷ್ಣನ ನೋಡ ಬನ್ನಿರೆಲ್ಲ 9 ಮುನಿವರರೆದ್ದು ಸ್ನಾನವಗೈದು ಉಷಃಕಾಲ ಘನಪೂಜೆಗೈದು ಪೊಂಗಲು ದೋಸೆಯ ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ ಮನದಣಿಸುತ್ತಲಾನಂದಿಪರು 10 ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ ನೀಲಮೇಘಶ್ಯಾಮ ನಿರ್ಮಲಾತ್ಮ ಆಲಯದೆಡಬಲ ಗರುಡ ಮುಖ್ಯಪ್ರಾಣ ಓಲೈಸೆ ಗೋಪಾಲಕೃಷ್ಣವಿಠಲನ 11
--------------
ಅಂಬಾಬಾಯಿ
ಅ ಸಾಗಿ ಬಾರೋ ಗುರುರಾಘವೇಂದ್ರರಾಯ | ವರ ಸತ್ಕಲುಗೇಯ ಪ ಕೂಗುತ ಕರೆಯುವ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ಅ.ಪ ಪಾವನಘನ ವೃಂದಾವನ ಮಂದಿರನೆ ಸದ್ಗುಣ ಬಂಧುರನೇ ಪಾವಮಾನಿಮತಶರಧಿ ಚಂದಿರನೇ ಧರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ 1 ಶರಣಜನರು ಮೈಮರೆದು ಕರೆಯಲಾಗಿ ನಿಲ್ಲದೆ ವರಯೋಗಿ | ಭರದಿ ಬಂದು ಕರಪಿಡಿಯುವ ಧೊರೆ ನೀನು ಎಂದರೀತೆವು ಸುರಧೇನು ಗತಿದಾಯಕ ನೀನೆಂದು ಭಜಿಪೆವು ದಯಾಸಿಂಧು 2 ಶಾಮಸುಂದರನ ಪ್ರೇಮವ ಪಡೆದಾತ ಜಗದೊಳು ಪ್ರಖ್ಯಾತ ನೇಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
--------------
ಶಾಮಸುಂದರ ವಿಠಲ
(ಅನುಭವ ಬಾರಾಮಾಸ ) ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ ಮಾನವ ಜನು ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ | ದೊರಯದು ಪರಮಾರ್ಥ | ಶ್ಲೋಕ 1 ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ | ಗುರು ಮಹಿಪತಿ ಸಾರಿದ ಬೋಧವಾ | ಪದ ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ | ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ ಸಾಧು ಸಂತರಾ | ಅವರ ಚರಣಾರವಿಂದಾ | ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ | ಮೋಟ ಮರ ನಿಲುಲುಂದಾ | ಶ್ಲೋಕ 2 ಮೆರೆವ ಅವಯವದೊಳು ಉತ್ತು ಮಂಗದಿ ನಿಂದು | ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು | ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು | ಪದ ಮಾಸ ಶೂನ್ಯವೇ ನೋಡು ಶ್ರವಣವೇ | ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ | ಹವಣದಿ ಸಂತರ ಮುಖದಿಂದಾ ಅನುಸರಣಿಂದಾ | ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ ವಾರ್ತರಿಯಾ | ಆಲಿಸಿದೇ ಸುಖ ಬಡುತಾ | ಶ್ಲೋಕ 3 ಕುಂಡಲ ವಿಟ್ಟಿಹಾ | ಹರಿ ಕಥಾಮೃತ ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ | ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ | ನೀಚ ವೃತ್ತಿಗೆ ಬಿದ್ದು | ಶ್ಲೋಕ 4 ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ | ಇಂಗಿತ್ಹೇಳಿದ ಮಹಿಪತಿ ನಂದನಾ | ಪದ ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ | ಸನ್ನುತ ಶ್ರೀಹರಿ ನಾಮವಾ ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ | ಆಡಿಬರಡಾದೆ ನೆಲಿಗೆ | ಶ್ಲೋಕ 5 ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ | ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ | ನರಾಧಮಾನೇ ಮಾವನ ಮುಖವೋ ನೃಪಮಾಯ ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ ಸ್ವಾಮಿ ಸುಖವೋ ಪದ ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ | ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ | ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು | ಮೈಯ್ಯ ಮರ್ತೆನು ಚಲಿಸಿ ಶ್ಲೋಕ 6 ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ | ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ | ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು | ನೂಕಿದನು ಇದರಿಂದಾ | (ತನಗಿಂದ ದೀನದುರ್ಬಲರನು ಕಂಡು ಹೊಡೆವನು | ಹೋಗಾಡಿದ ನಿಜಾನಂದ ) ಶ್ಲೋಕ 7 ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ | ಶ್ಲೋಕ 8 ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ ಪದ ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು | ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ ನಾನು ಕೊಳಲಿಲ್ಲಾÀ ಸುಖ ಬಡಲಿಲ್ಲಾ | ದೋಷದನ್ನವ ಉಂಡು ವಡಲನು ನಾನು ಹೊರೆದನು ಬಯಸುತ ಜಿವ್ಹ ಸ್ವಾದಾ ಶ್ಲೋಕ 9 ವಿದತವಾದ ರಸ್ನಾವ ಉಂಬನು | ಮುದದಿ ತತ್ವದ ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ ಮಂದನಾ | ಇದನು ಸಾರಿದ ಮಹಿಪತಿ ನಂದನಾ | ಪದ ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ | ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ | ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು | ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ | ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು | ಶ್ಲೋಕ 10 ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ ಪದ ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ | ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ | ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ ಶ್ಲೋಕ 11 ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ ಮಾಡಲು ಬಳುಕುವಾ | ಮನುಜಪಾದವೋ ಪಾದವೋಮಂದನಾ | ಅನುವ ಸಾರಿದ ಪದ ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ | ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ ಶ್ಲೋಕ 12 ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ | ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ | ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ | ಪಿಂತಿನ ತಪ್ಪವ ನೋಡದೇ ತಡ ಮಾಡದೇ | ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ ಸಾರಥಿ | ನಾಮ ಬಿಡದೆ ಕೊಂಡಾಡಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಇ) ಆತ್ಮನಿವೇದನೆ ಏನು ಮಾಡಲಿ ವೆಂಕಟೇಶ ಈ ಬೆಳೆಯು ಸೋನೆಯಿಲ್ಲದೆ ಉರಿದುದು ಪ ನಾನಾ ಪ್ರಕಾರದೊಳು ಹಾನಿಯಾಯಿತು ಇರವು ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ ಮೂಡದೆಸೆಯಳು ಬಂದುದು, ಆ ಮಳೆಯು ಬಡಗದೆಸೆಯಳು ಸುರಿದುದು ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ ನಡುವೆ ಬಿಡುವುದು ಯಾತಕೆ 1 ಕಟ್ಟುಕಡು ಮದಗ ಸಹಿತ, ಈ ಊರ ತಲೆ ಗಟ್ಟಿನೊಳು ನಾ ಕಾಣೆನು ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ ದೃಷ್ಟಿಯಲಿ ನೋಡು ನೀನು 2 ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ ಫಲವೆಲ್ಲ ಬೆಳೆ ಕೆಟ್ಟಿತು ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು ಎಳೆದೆಳೆದು ಕೊಲುವನಲ್ಲ 3 ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ ಬಿಟ್ಟು ಪೋದುದು ಇಳೆಯನು ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ ಮುಟ್ಟಿ ನೋಡುವರಿಲ್ಲವೊ 4 ಹದಿನಾಲ್ಕು ಲೋಕವನು ನೀ ನಿನ್ನ ಉದರದೊಳಗಳವಟ್ಟಿಹೆ ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ ಉದುರದೇತಕೆ ಇಳೆಗೆ ಮಳೆಯು 5 ಎಲ್ಲ ಬೇಡಿಯೆ ಕೊಂಬರು, ಈ ಹರಕೆ ಯಲ್ಲಿ ಅಂತರಬಾರದು ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು ಬೆಲ್ಲವಾಗಿಹ ಮಳೆಯನೆರೆಯೊ 6 ನೀಲಮೇಘಶಾಮ ವರ್ಣ, ಕಾಣಲಾ ಮೂಲೋಕದೊಡೆಯಾ ನಿನ್ನ ಕಾಲಮೇಘವು ನಿನಗೆ ದೂರವಾಗುವುದುಂಟೆ ಆಲಸ್ಯ ಮಾಡಬೇಡ 7 ಬಡವರೆಲ್ಲರು ಕೂಡಿಯೇ, ಒಪ್ಪು ಕೈ ವಿಡಿದು ಬೇಡಿಯೇ ಕೊಂಡೆವು ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ ಒಡೆಯ ದಯದೋರೊ ನೀನು 8 ಸ್ವಾಮಿ ನಿನ್ನಯ ನಾಮವು, ಜನರಿಂಗೆ ಕಾಮಿತಾರ್ಥವನೀವುದು ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
(ಈ) ಬಾಲಕೃಷ್ಣಲೀಲೆ ಅಣ್ಣ ಬಲರಾಮನ ಸ್ತುತಿ ಚಂದ್ರವಾರಿಧಿಮಣಿ ನಂದನ ರೋಹಿಣಿಸುಂದರ ರವಿ ಸಮಾ ವಂದಿಪೆ ನಿಮಗೆ ಪ ಮೂಲಪುರುಷ ಯದು ಬಾಲಕೃಷ್ಣಗೆ ಹಾರಬಾಲ ಭೂಷಣ ಹರಿ ಬಾಲ ಸೋದರನೆ 1 ಅಂಗದ ಕಪಿವರನಂಗಜ ರಾಘವಅನಂಗಾ ನಾರಿಗಳು ಉತ್ತುಮಾಂಗನ ಸಖನೆ 2 ಈಶ ಮನಸ ದೋಷ ಧೀಶ ಕಳೆದುಇಂದಿರೇಶನಲಯತವ ತೋಷಿಸು ಪ್ರಭುವೆ3
--------------
ಇಂದಿರೇಶರು
(ಉ) ಗುರುನಮನ ಶ್ರೀ ರಾಘವೇಂದ್ರರು ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ 1 ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ 2 ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ವೀರನಾರಾಯಣಭಕುತರ ಸಲಹದೆ 3
--------------
ವೀರನಾರಾಯಣ
(ಏಕಾದಶಿಯ ಮಹಿಮೆ) ಸಾರುತ ಬಂದಿತೇಕಾದಶಿ ನಮ್ಮ ನಾರಾಯಣನಾರಾಧಿಸಿ ಸುಖಗೊಳಿರೆಂದು ಪ. ಕರ್ಮ ಕಲುಷವೆಲ್ಲ ಕಳಕೊಂಡು ಕುಲವನ್ನೆ ನಿರ್ಮಲ ಮಾಡುವ ಮರ್ಮವಿದು ಸ್ವರ್ಮಹೀಶ ದೇವ ಶರ್ಮವರದನ ಚಾ- ತುರ್ಮಾಸೆಯಲಿ ಪೂಜಿಸಿರಿಯೆಂದು ಡಂಗುರ 1 ಕಮಲ ಮುಖ್ಯ ಹಲವು ಪುಷ್ಪವನೇರಿ ಸಲು ಕೋಟಿಮಡಿಯಾದ ಫಲವೀವುದು ನಿತ್ಯ ಮೋದದಿ ಸಿರಿಯಪ್ಪಿ ಮಲಗಿರುವನು ವೃಂದಾವನ ಮೂಲದಲಿಯೆಂದು2 ಸುಂದರತರ ಪೂರ್ಣಾನಂದ ವೆಂಕಟರಾಜಾ- ಜಾಗರ ಸಹಿತ ಒಂದುಪವಾಸವಾÀದರು ಮಾಡಲಘವೆಲ್ಲ ಇಂದು ನಿಶ್ಚಯವಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ