ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ ಪ ಕಾಲಕಾಲಕೆ ನಿನ್ನ ಕಾಲಿಗೆರಗುವೆ ಕರುಣಾಲಯತೋರೋ ಕರುಣಾಳುಗಳರಸನೆ ಅ.ಪ. ತುಳಸಿಗೆ ಕಳಸೀದರೆನ್ನ ತುಳಸಿಯ ತಾರದೆ ನಾ ಹೊಲಸಿನೊಳಳುತಿರೆ ಘಳಿಗೆಯಾ ತಾಳದೆ ಘಳಿಸಿದೆ ತುಳಸಿಯಾ ಕಳಸವ ಕಳ್ಳ ನಾ ಗೆಳೆಯನೆ ಕಳವಳಿಗಳು ಕಳುಹಿಸಿ ಕಾಳ್ವಗೈಸುವ ಕಾಳಿರಮಣ ನಿನ್ನ ಧೂಳಿ ಧರಿಸುವಂತೆ ಖೂಳನಾ ಮಾಡದೆ 1 ಚಲುವ ಚನ್ನಿಗ ನೀನಹುದೋ ಚಂಚಲ ನಯನಾ ಕರುಣಾ ಚಲ ನೀನಹುದೊ ಚಾಲೂವರಿಯಲು ಎನಗೆ ಕಾಲವು ತಿಳಿಯದು ಶೂಲಿ ಚಂಚಲ ಎನ್ನ ಸಂಚಿತಗಾಮಿ ವಂಚಿಸದೆ ಕಾಯ್ವುದೊ ಇದೇ ಕೊಡುವುದೋಕಂಬು ಕಂಧರಮಣಿ ಹಂಚುವುಗಾಣದೆ ಚಂಚಲೂ ನಯನದಿ ಸುರವಂಚಕನಾಗಿ ಪ್ರಪಂಚದಿ ಶರಪಂಚನ ಚಿಂತಿಸಿಸಂತೆಯಾನರುಹಿದ 2 ಅಕಳಂಕ ಮಹಿಮನೆ ದೋಷದೂರ ನೀ ಗುಣವಂತನೇ ಸಹಸ ಬಲವಂತನೆ ಕಾಂತಿಯ ತಂದನೆ ಕಾಂತಿಯುಳ್ಳ ಕಂತಿಯು ಧರಿಸಿದ ದಿಗಂತ ನಿಷ್ಕಿಂಜನರ ಕಾಂತನೆ ಭುಜಬಲ ಮಹಬಲವಂತನೆ ಕುರುಕಂತನೆ ಅಂತು ಇಂತು ತಂತು ಬಿಡದೆ ನಿಜ ಕುಂತಿಯ ಮಗನನ ಕಂತೆಯುಪೂಜಿಪ ಮಂತ್ರಿಯೆನಿಸಿ ಸುಖತಂತ್ರ ಪಠಿಸಿ ಶೃತಿಪಂಶವಿಂಶತಿ ದ್ವಿಪಿಂಚಕಲ್ಪವ ಮಿಂಚಿನಂದದಿ ತಪವಗೈದು ಪಂಚಪದವಿಯ ಪೊ0ದುಕೊಂಡು ಪಂಚ ಬಾಣನ ಪಿತನು ಯನಿಸಿದ ಮಾಂಗಲ್ಯ ಲಕುಮಿಯ ರಮಣ ಯೆನ ತಂದೆವರದಗೋಪಾಲವಿಠ್ಠಲನ ಆತಂಕವಿಲ್ಲದೇ ಚಿಂತಿಸುವ ನಾರಾಯಣಾಚಾರ್ಯನೇ3
--------------
ತಂದೆವರದಗೋಪಾಲವಿಠಲರು
ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ಪ ಈ ಕರೆಕರೆ ಸಂಸಾರಶರಧಿಯೊಳು ನಿಂದೆ ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿಅ.ಪ ತೋಯಜಾಂಬಕ ನಿನ್ನ ನಾನೆಂದಿಗೆ ಕಾಯದೊಳು ಕಾಂಬೆನೊ ಮಾಯಾರಮಣನೆ ನೀ ಮಾಯವ ಹರಿಸಯ್ಯ ಆಯಾಸಗೊಳಿಸದೆ ಕಾಯುವುದೀಗಲೆ 1 ನಾನಾಯೋನಿಗಳಲ್ಲಿ ನಾ ಬರಲಂಜೆನೋ ಶ್ವಾನಸೂಕರ ಜನ್ಮದಿ ನೀನಿಟ್ಟರಾದರು ಶ್ರೀನಿಧಿಯೆ ನಿನ್ನಯ ಸ್ಮ- ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2 ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ ನಾಕೇಶ ಮೊದಲಾದ ಪಿ- ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ ಶೋಕಪಡಿಸುವರಯ್ಯ 3 ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ ದುರ್ಗಮವಾಗಿಹುದೊ ಸ್ವರ್ಗ ಅಪ- ವರ್ಗಪ್ರದನೆ ಎನ್ನಯ ಭವ- ದುರ್ಗಕಡಿದು ಸನ್ಮಾರ್ಗ ಕರುಣಿಸೊ 4 ಸ್ವಾಮಿತೀರ್ಥದಿವಾಸ ಶ್ರೀಜಗದೀಶ ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ ಕಮಲಾಪತಿಯೆ ದೇವ 5
--------------
ಉರಗಾದ್ರಿವಾಸವಿಠಲದಾಸರು