ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ ಪಾಪಕುಲಾನಲ ತಾಪಸ ಸಂಕುಲ ಶ್ರೀಪತೆ ಮಾಂಗಿರಿನಿಲಯ ಶುಭಾಕುಲ ತಾಪತ್ರಯ ಕುಲಜಾಲ ನಿರ್ಮೂಲ ಗೋಪಗೋಪಿಕಾನಂದದುಕೂಲಾಅ.ಪ ಮುರಳೀಧರ ಘನಸುಂದರ ಭಾವ ದೇವಾದಿದೇವ ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ ಸ್ವರನಾದದಿ ಘಲು ಘಲ್ಲೆನುತಿರುವಾ ವರನೂಪುರದುಂಗುರ ಝಣ ಝಣರವ ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ 1 ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ ಮದ್ದುಣಿಸಿದಳ ಒದ್ದು ಸಂಹರಿಸಿದ ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ 2 ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ ಠಕ್ಕುಗಾರ ಸೊಬಗಿಂದ ರಾಧೆಗೆ ಮುದ ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ 3 ವೈರಿ ಕಂಸಾರಿ ಶೌರಿ ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ ಭವ ಬಂಧನ ಪರಿಹಾರಿ ಶರಣರಿಗುಪಕಾರೀ ಇಭಕುಲಕೇಸರಿ ಘನ ಗಿರಿಧಾರೀ ಅಭಯಪ್ರದ ಹರಿ ಗೂಢಸಂಚಾರಿ ನಭಚರಹರಿ ಮಾಂಗಿರಿ ಸುವಿಹಾರೀ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಈಗಲುಪ್ಪವಡಿಸಿದಳು ಇಂದಿರಾದೇವಿಯೋಗರತಿ ನಿದ್ರೆ ತಿಳಿದು ಪಕಡೆಗಣ್ಣಕಪ್ಪಅಂಗೈಯಿಂದಲೊರಸುತಸಡಲಿದ ತುರುಬ ಬಿಗಿದು ಕಟ್ಟುತ ||ನಡುವಿನೊಡ್ಯಾಣವ ನಟನೆಯಿಂ ತಿರುವುತಕಡುಕ ಕಂಕಣ ಬಳೆ ಕರದಿ ಘಲ್ಲೆನುತ 1ಕೂರುಗುರ ಗಾಯವನು ಕೊನೆ ಬೆರಳಲೊತ್ತುತಹಾರದ ತೊಡಕನು ಬಿಚ್ಚಿ ಹಾಕುತ ||ಜಾರಿದ ಜಾಜಿದಂಡೆ ಸರವನೀಡಾಡುತಮೋರೆಯ ಕಿರುಬೆವರ ಮುಂಜೆರಗಿಲೊರಸುತ 2ರಕ್ಕಸ ಕುಚದೊಳಿರ್ದ ಕಸ್ತುರಿಯನೊರಸುತಚಕ್ಕನೆ ಕನ್ನಡಿಯೊಳು ಮುಖ ನೋಡುತ ||ಅಕ್ಕರದ ತಾಂಬೂಲ ಸರಸದಿಂದುಗುಳುತಚೊಕ್ಕಪುರಂದರವಿಠಲ ನೋಡಿ ನಗುತ3
--------------
ಪುರಂದರದಾಸರು