ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳವೆನ್ನಿರೆ ಮಹಲಕ್ಷ್ಮಿ ದೇವಿಗೆ ಶುಭ ಪ ಅರಳು ಮಲ್ಲಿಗೆ ಗಂಧ ಸುರಪಾರಿಜಾತ ಪುಷ್ಪವರ್ಪಿಸಿ ನರಸಿಂಹನರಸಿಗೆ ಪರಿಪರಿ ಫಲಗಳ ಹರದೇರುಡಿಯ ತುಂಬುತಲಿ ಶ್ರೀ ಲಕ್ಷ್ಮಿಗೆ 1 ಸರಿಗೆ ಸರವು ಜರದ ನೆರಿಗೆ ಮೇಲೊಲಿಯಲು ಅರಳು ಮಲ್ಲಿಗೆ ಜಾಜಿ ಸರವ ಮುಡಿದು ಹರುಷದಿಂದಲಿ ನಾಗಮುರಿಗಿ ಕಂಕಣಕೈಲಿ ಪರಿಪರಿ ವರಗಳ ಕೊಡುವಳಿಗೆ ಜಯ 2 ಕಡಗ ಕಾಲಂದುಗೆ ಘಲುರೆಂಬನಾದದಿ ಬೆಡಗಿನಿಂದಲಿ ಬರುವ ಭಾಗ್ಯದಾಯಿನಿಗೆ ಕಡಲಶಯನ ಕಮಲನಾಭವಿಠ್ಠಲನ ರಾಣಿ ಶುಭ 3
--------------
ನಿಡಗುರುಕಿ ಜೀವೂಬಾಯಿ
ಸಂಪ್ರದಾಯದ ಹಾಡುಗಳು ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ಜೋ ವಾಸುದೇವ ನಾರಾಯಣ ಜೋ ಜೋ ಪ ಕೃತಿಶಾಂತಿ ಜಯ ಮಾಯ ಶ್ರೀಲಕ್ಷ್ಮಿಪತಿ ಜೋ ಪತಿತ ಪಾವನ ಪುರುಷೋತ್ತಮ ಜೋ ಜೋ ಅ.ಪ ಕುಂದಣ ಮಯವಾದ ಚಂದ ತೊಟ್ಟಿಲಲಿ ಚಂದ್ರ ಸೂರ್ಯರ ಗೆಲುವ ಮುಖಕಾಂತೆಯಲಿ ಇಂದಿರಾಪತಿ ಶ್ರೀಶ ಇಭರಾಜವರದ ಮೂಕಾಂಬಿಕೆ ಮಲಗೆ ತೂಗುವೆ ಹರುಷದಲಿ 1 ಸುರರೆಲ್ಲ ನೆರೆದು ಸಂಭ್ರಮಗೊಳುತಿರಲು ಸುರಗಂಧರ್ವಪ್ಸರ ಸ್ತ್ರೀಯರು ನಾಚುತಿರಲು ಹರಬ್ರಹ್ಮ ಮೊದಲಾದವರು ಸ್ತುತಿಸುತಲಿರಲು ಭಳಿರೆ ಜಗನ್ಮಾತೆ ರಕ್ಷಿಸು ರಕ್ಷಿಸೆನಲು 2 ಘಲು ಘಲು ಘಲುರೆಂಬ ಕಾಲ್ಗೆಜ್ಜೆಗಳಿಂದ ಥಳ ಥಳ ಹೊಳೆವ ಪೀತಾಂಬರದ ಚಂದ ಗಿಳಿಗೆಜ್ಜೆ ಹೆರಳು ಬಂಗಾರಗಳಿಂದ ಹೊಳೆವ ಮೀನ ಬಾವುಲಿ ಸರಗಳ ಚಂದ 3 ಕನ್ನಡಿ ಕದುಪಿನ ನಗೆಮುಖ ಕಾಂತಿ ಸಣ್ಣ ಮೂಗುತಿನಿಟ್ಟು ನಲಿಯುತ ಶಾಂತಿ- ಯನು ತೋರುತ ಭಕ್ತಜನರಿಗೆ ಭ್ರಾಂತಿ ಯನು ಕಳೆದು ಉದ್ಧರಿಸುವ ಕಾಂತೆ4 ಕಮಲ ಮುಖಿಯ ಕರಕಮಲದಿ ಅಭಯ ತೋರುತ್ತ ಭಕ್ತರಿಗೆಲ್ಲ ಉಣಿಸಿ ಅಮೃತವ ಕಡೆಗಣ್ಣನೋಟದಿ ಜಗವ ಮೋಹಿಸುವ ಕಮಲನಾಭವಿಠ್ಠಲ ಭಕುತರ ಪೊರೆವ 5
--------------
ನಿಡಗುರುಕಿ ಜೀವೂಬಾಯಿ