ಸತಿ ಮದ್ಬಾರ ನಿನ್ನದಮ್ಮಾ | ಕರುಣದಿ ಪೊರೆಯಮ್ಮ ಪ
ಸರಸಿಜಾಕ್ಷ ಹರಿಭಕುತಿ ನೀಡೆ ತಾಯೇ | ಆರತರನು ಕಾಯೇ ಅ.ಪ.
ಕಾಳಿ ದ್ರೌಪತಿ ಶಿವಕನ್ಯೆ | ಮನ್ಮನದಲಿ ನಿಲು ಘನ್ನೆಫಾಲಾಕ್ಷನ ಪ್ರಿಯ ಜನನೀ | ದಯದಲಿ ಪೊರೆ ಕರುಣೀ ||ನಳನಂದಿನಿ ಇಂದ್ರಸೇನೆ ತಾಯೇ | ಕಲಿ ಕಲ್ಮಷ ಕಳೆಯೇಏಳಲ ಮಾಡದೆ ನೀಲವರ್ಣನ ತೋರೇ | ಕರುಣಾರಸ ಬೀರೇ 1
ಭವ ಖಗ ಪನ್ನಗ ಭವ ದೂರೇ2
ಕೃತಿ ರಮಣನ ಪ್ರಿಯ ಪುತ್ರಿ | ನರಹರಿ ಗುರುಭಕ್ತೀಪ್ರಥಮಾಂಗನ ಪ್ರಿಯರಾಣೀ | ನಮಿಸುವೆ ಬ್ರಹ್ಮಾಣಿ ||ಪತಿತನ ಪಾಲಿಸೆ ಪರಮ ಕಲ್ಯಾಣಿ | ಪಾವನೆಯ ಭಾವಿವಾಣಿಗತಿಪ್ರದ ಗುರು ಗೋವಿಂದ ವಿಠಲನ್ನ | ಪದ ತೋರಿಸೆ ಘನ್ನ 3