ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಇಂಥಾತನು ಗುರುವಾದದ್ದು ನಮಗೆ ಇ-ನ್ನೆಂಥಾ ಪುಣ್ಯದ ಫಲವೊ. ಪಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀಕಾಂತನ ಕಾಣಲಿಕ್ಕಾಯಿತುಪಾಯ ಅ.ಪತಾನು ಇಲ್ಲದೆ ಈ ಜಗದೊಳು ಹರಿಯಿಪ್ಪಸ್ಥಾನವಿಲ್ಲವೆಂದು ಸಾರಿದಹೀನ ದೈವಗಳ ನಂಬಿದ ಜನರಿಗೆ ತನ್ನಙ್ಞÕನದಿಂದಲಿ ಹರಿಯ ತೋರಿದ ||ನಾನಾ ಜೀವಿಗಳ ಒಳಗೆ ಹೊರಗೆ ಇದ್ದುತಾನೇ ಮುಖ್ಯನಾಗಿ ಮೀರಿದ |ಶ್ರೀನಾರಾಯಣನೆಂದು ಪೇಳುವರಿಗೆ ತನ್ನಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ 1ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆಉನ್ನತ ಗುರುವಾಗಿ ಮೀರಿದ |ಘನ್ನವಾದ ಶ್ರುತಿತತಿಗಳಿಂದಲಿ ಜೀವಭಿನ್ನನು ಎಂತೆಂದು ತೋರಿದ ||ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-ಚ್ಛಿನ್ನ ಭಕುತಿಯಿಂದ ಮೆರೆದ |ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |ತನ್ನ ನಂಬಿದ ಭಕುತರ ಪೊರೆದ 2ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-ಧಾರವೆಂಬುದ ಕಲಿಸಿದ |ಭಾರಣೆಯಿಂದಲೊಪ್ಪುತ ಬಲು ಹರುಷದಿಭಾರತಿಯನು ಒಲಿಸಿದಮೂರೇಳು ದುರ್ಭಾಷ್ಯಗಳ ಕಾನನವ ಕು-ಕಾರದಂತೆ ಕಡಿದಿಳಿಸಿದಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಙ್ಞÕಚಾರ್ಯರೆಂದೆನಿಸಿದ 3
--------------
ಪುರಂದರದಾಸರು
ದೇವ ಬಾರೊ ಶ್ರೀನಿವಾಸದೆÉೀವನೆ ಬಾರೊ ನನ್ನದಾವದಾವಪರಿಯ ತಪ್ಪ ಕಾವನೆ ಬಾರೊಪ.ಜೀವನ ಪಾವನವ ಮಾಡುವನೆ ಬಾರೊ ನನ್ನಭಾವದ ಬಯಕೆ ಪೂರೈಸುವನೆ ಬಾರೊ 1ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲಬಾರೊ ಅಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೊ 2ಹಡೆದ ತಾಯಿ ತಂದೆಗುರುಒಡೆಯನೆ ಬಾರೊ ಎನ್ನನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೊ 3ತೆರೆ ತೆರೆ ಬಪ್ಪಾಸೆಯ ಚರಿಸಲು ಬಾರೊ ಆತುರದ ಕಾಮಾದ್ಯರ ನೀನೊರೆಸಲು ಬಾರೊ 4ಕ್ಷುಲ್ಲನುದಾಸಿಸುದುಚಿತಲ್ಲವೊ ಬಾರೊ ಪ್ರಾಣದೊಲ್ಲಭ ಬಿರುದು ನಿನ್ನದಲ್ಲೇನೋ ಬಾರೊ 5ಪಾಪಗಳು ಘನ್ನವಾದರೇನಯ್ಯ ಬಾರೊಕೃಪಾಪಾಂಗದಲ್ಲವು ಉಳಿಯಲಾಪವೆ ಬಾರೊ 6ಶ್ರೀರಮಣ ಎಂದಿಗಾಪ್ತರಾರಿಲ್ಲೊ ಬಾರೊ ಸುಖತೀರಥೇಶ ಪ್ರಸನ್ವೆಂಕಟರಾಯ ಬಾರೊ 7
--------------
ಪ್ರಸನ್ನವೆಂಕಟದಾಸರು