ನಿನ್ನ ಪೂಜೆ ಮಾಡುವುದಕನಾನುಕೂಲವು ಪ
ಎನ್ನದೇಹ ಪೋಷಣೆಗೆ ಎಲ್ಲ ಇರುವದು ಅ.ಪ
ತಾನು ಉಡುವುದಕ್ಕೆ ಹೆಚ್ಚುಧನದ ವಸ್ತ್ರವು
ದಾನ ಮಾಡುವುದಕೆ ನೀಚÀತರದ ಅರುವೆಯೂ 1
ಘನ್ನಲೋಕ ಮಾತೆಗೆ ಗಿಲೀಟು ನಗಗಳು 2
ಯಜಮಾನಗೆ ಘೃತದ ಪಕ್ವ ಭಕ್ಷ್ಯ ಭೋಜ್ಯವು
ಇತರ ಜನರಿಗೆಲ್ಲ ಎಣ್ಣೆಕರಿದ ಭಕ್ಷ್ಯವು 3
ದೇಹ ಸಂಬಂಧಿಗಳಿಗೋಸುಗ ಸಾಲಗೈವುದು
ಶ್ರೀಹರಿ ನಿನ್ನವರು ಕೇಳೆ ಇದ್ದರು ಇಲ್ಲವೂ 4
ಅನ್ಯಜನರೊಳಿದ್ದಗುಣವು ದೋಷವೆಣಿಪುದು 5
ಪರಿ ತಿಳಿದು ಕೊನೆಗೆ ನರಕ ಹೊಂದುತ 6
ಘನಮಹಿಮೆ ಗುರುರಾಮವಿಠಲ ನಿನ್ನ ಮರೆವರು 7