ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ಶ್ರೀಹರಿಸ್ತುತಿ ಜೈ ಹರಿ ವಿಠ್ಠಲ ಪಾಂಡುರಂಗ 1 ರಕುಮÁಯೀಧವ ಪಾಂಡುರಂಗ 2 ಸಾಧುಜನಾರ್ಚಿತ ಪಾಂಡುರಂಗ 3 ಕಾಲಾಂತಕಪ್ರಿಯ ಪಾಂಡುರಂಗ 4 ಕರಿರಾಜವರದ ಪಾಂಡುರಂಗ 5 ವನಜಾಸನನುತ ಪಾಂಡುರಂಗ 6 ಕುಟಿಲಾಂತಕಹರೆ ಪಾಂಡುರಂಗ 7 ಭಾವಜಪಿತಹರೆ ಪಾಂಡುರಂಗ 8 ಫಣಿಪತಿಶಯನ ಪಾಂಡುರಂಗ9 ದುರಿತವಿದೂರ ಪಾಂಡುರಂಗ 10 ವನಜನಾಭಹರೆ ಪಾಂಡುರಂಗ 11 ವಾತಾತ್ಮಜನುತ ಪಾಂಡುರಂಗ 12 ಜಗದೋದ್ಧಾರ ಪಾಂಡುರಂಗ 13 ಪುಂಡರೀಕವರದ ಪಾಂಡುರಂಗ 14 ದೀನಮಂದಾರ ಪಾಂಡುರಂಗ 15 ಸಿಂಧುಶಯನಹರೆ ಪಾಂಡುರಂಗ 16 ಶ್ರೀಕರಸೇವಿತ ಪಾಂಡುರಂಗ 17 ನರಕಾಂತಕಹರೆ ಪಾಂಡುರಂಗ 18 ಸಾಮಗಾನಪ್ರಿಯ ಪಾಂಡುರಂಗ 19 ಕ್ಷಾತ್ರಕುಲಾಂತಕ ಪಾಂಡುರಂಗ | ಧಾತ್ರೀರಮಣ ಪಾಂಡುರಂಗ 20 ಕಾಮಿತಫಲದ ಪಾಂಡುರಂಗ 21 ಪಾವನಚರಿತ ಪಾಂಡುರಂಗ 22 ಉತ್ತಮದೇವನೆ ಪಾಂಡುರಂಗ 23 ಸೋಜಿಗಪುರುಷನೆ ಪಾಂಡುರಂಗ24 ಭಾನುಪ್ರಕಾಶ ಪಾಂಡುರಂಗ 25 ಸುರಭಿನಿವಾಸ ಪಾಂಡುರಂಗ 26 ಭಕುತಪೋಷಕ ಪಾಂಡುರಂಗ27 ತ್ರಿಗುಣಾತೀತಾ ಪಾಂಡುರಂಗ 28 ಚಂದ್ರಮೌಳಿಹಿತ ಪಾಂಡುರಂಗ26 ಸುರಮುನಿಸನ್ನುತ ಪಾಂಡುರಂಗ30 ದಾನವಾಂತಕ ಪಾಂಡುರಂಗ 31 ಭೂಸುರವಂದಿತ ಪಾಂಡುರಂಗ32 ಸೃಷ್ಟಿಗೊಡೆಯ ಶ್ರೀ ಪಾಂಡುರಂಗ 33 ಉರ್ವಿರಮಣ ಪಾಂಡುರಂಗ 34 ಶೃತಿತತಿವಿನುತ ಪಾಂಡುರಂಗ 35 ಜೀವೋತ್ತಮನುತ ಪಾಂಡುರಂಗ36 ನಾಕಾಧಿಪನುತ ಪಾಂಡುರಂಗ 37 ಮೋದದಾಯಕ ಪಾಂಡುರಂಗ38 ಭಾಗವತಪ್ರಿಯ ಪಾಂಡುರಂಗ39 ಕರುಣಿಗಳರಸನೆ ಪಾಂಡುರಂಗ40 ತಾಪತ್ರಯಹರೆ ಪಾಂಡುರಂಗ41 ಕರ್ಮಾಧಿಪತೆ ಪಾಂಡುರಂಗ42 ಕಪಟನಾಟಕ ಪಾಂಡುರಂಗ43 ಬಾದರಾಯಣ ಪಾಂಡುರಂಗ44 ಮುಂದೆ ದಾರಿಯೇನೋ ಪಾಂಡುರಂಗ 45 ಪಾಶಪರಿಹರಿಸೊ ಪಾಂಡುರಂಗ 46 ಎಷ್ಟು ಪೊಗಳಲೋ ಪಾಂಡುರಂಗ 47 ಇಷ್ಟದಾಯಕ ಪಾಂಡುರಂಗ 48 ಜನುಮ ನೀಗಿಸೊ ಪಾಂಡುರಂಗ 49 ಘನ್ನಮಹಿಮನೆ ಪಾಂಡುರಂಗ 50 ದೀನವತ್ಸಲನೆ ಪಾಂಡುರಂಗ 51 ಪಾದ ಪಾಂಡುರಂಗ52 ಶುಭಮಂಗಳಹರೆ ಪಾಂಡುರಂಗ 53 ಶ್ರೀಶಕೇಶವ ಪಾಂಡುರಂಗ 54
--------------
ಶ್ರೀಶ ಕೇಶವದಾಸರು