ಭಕ್ತವತ್ಸಲ ಹರಿ ಎಂಬ ಬಿರುದು ನಿನ
ಗಿತ್ತವರ್ಯಾರಯ್ಯಾ ಹೇ ಜೀಯಾ ಪ
ತತ್ತರಿಸುತಲಿಹರು ಈ ಜಗದೊಳು ಅ.ಪ
ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ
ಪರಮ ಸುಜನರುಗಳು ಈ ಧರೆಯೊಳು
ಒರಳಿಗೊಡ್ಡಿರುವ ಶಿರಗಳುಳ್ಳವರಂತೆ
ದುರುಳರ ಭಯದಿಂದ ನರಳುತಿರೆ 1
ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ
ಕಾಶ ಇವರಿಗಿಲ್ಲ ಈ ಭುವಿಯೊಳು
ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ
ಹಾಸ ಮಾಡುತಲಿಹೆಯೋ ಜಗದೀಶ 2
ಪರಿ ಘನ್ನಬಿರುದುಗಳು
ಇನ್ನು ಉಳಿವುದೆಂತೋ ನಾ ಕಾಣೆ
ಸನ್ನುತಿಸುವವರಿಗೆ ಇನ್ನಾದರು ಸುಖ
ವನ್ನು ನೀ ದಯಮಾಡೋ ಪ್ರಸನ್ನ 3