ಪರಮ ಪಾವನ ಮೂರುತಿಯೇ |
ಶರಣ ರಕ್ಷಕ ಮಹೀಪತಿಯೇ ಪ
ಸರ್ವಾಗಮ ಸನ್ಮತಾ ದೋರ್ವದು ನಿನ್ನ ಚರಿತಾ |
ಉರ್ವಿಯೊಳಗೆ ಸುಖದಾತಾ | ಮೂರ್ವೀ ಜಗವಂದಿತಾ |
ಸರ್ವಗುಣ ನಿಧಿಯೇ ನೀ | ಸರ್ವರೊಳು ವ್ಯಾಪ್ತನಾಗಿ |
ಕಾಲ ಕೊಂಬೆ1
ಕಾಮನೆ ಪೂರೈಸುವಾ | ಕಾಮಧೇನುವೆ ಜಗಜೀವಾ |
ಸುರತರು ದೇವಾ |
ಸ್ವಾಮಿ ನೀ ಗತಿಯೆಂದು | ನಿಮ್ಮೊರೆ ಹೊಕ್ಕರೆ |
ಪ್ರೇಮದಿ ಸಲಹುವೆ | ಈ ಮನುಜರನು2
ನಿನ್ನ ಮಹಿಮೆ ತಿಳಿಯಲು | ಎನ್ನಳವೇ ಧರಿಯೊಳು |
ಚಿನ್ನ ಕೃಷ್ಣೊಡಿಯಾ ದಯಾಳು |
ಉನ್ನತೋನ್ನತ ಕೃಪಾಳು | ಮುನ್ನ ಮಾಡಿದ ಘನ್ನಪರಾಧವ |
ಇನ್ನು ಕ್ಷಮಿಸಿ ನೀ | ಚನ್ನಾಗಿ ಕಾಯೋ3