ಏತಕೀ ಭಯ ನೀತಿಯೇನಯ್ಯ ಪ
ಮಾತುಕೇಳು ತಾಮನದಲ್ಲಿನೊಂದು ಅ.ಪ
ತಬ್ಬಿಕೊಂಡಿರ್ಪ ಪ್ರಾರಬ್ದ ಬಿಡುವುದೆ
ಅಬ್ಜನಾಭನಿರುವ ನಮ್ಮರಕ್ಷಿಸಲು 1
ಬೊಬ್ಬೆರೋಗ ಬಂತೆಂದಬ್ಬರ ಜನಗೈಯ್ಯೆ
ಉಬ್ಬಿಉಬ್ಬಿನೀ ಊರಬಿಟ್ಟೋಡಲು 2
ಹುಲಿಗಳಂಥನರರು ಇಲಿಯ ನೋಡಿ ಬೆದರಿ
ಕಳೆದುಕೊಂಬರು ತಮ್ಮ ಸರ್ವಸ್ವವ 3
ಛಳಿ ಮಳೆಯು ಬಿಸಿಲು ಗಾಳಿಯೊಳು
ಬಳಲುವುದ್ಯಾಕೆ ಬುದ್ಧಿಯಿಲ್ಲದೆ 4
ಕುನ್ನಿ ನಿನ್ನಂಥವರೆಷ್ಟುಮಂದಿ ಪೋದರು
ಘನ್ನಗುರುರಾಮವಿಠಲನ್ನ ನಂಬು5