ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ 1 ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ ನಟನೆ ತನ್ನೊಳು ದೋರುವ ಗುರುಭಕ್ತಿಯ 2 ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು ಭಾಸುತಿಹ್ಯದು ವಾಸುದೇವನ ಪುಣ್ಯಚರಣವು ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ ಧ್ರುವ ಪಿಡಿದರೆ ದೃಢ ಗುರುಭಕುತಿ ಸಾಕು ಷಡದರುಷಣ ಗೂಢವ್ಯಾತಕೆ ಬೇಕು ನಡಿನುಡಿಯಲಿ ನಿಜ ಭೇದಿಸಬೇಕು ಪಡಕೊಂಡರೆ ಬಾಹುದು ಘನಥೋಕÁ 1 ಒಂದರಿಯದೆ ನಿಜದೋರುದು ಖೂನ ಸಂದಿಸಿ ಬೆರೆವುದು ಮನ ಚಿದ್ಛನ ತಂದೆ ಸದ್ಗುರು ದಯದನುಸಂಧಾನ ಎಂದೆಂದಿಗೆ ಅದ ತಾ ನಿಧಾನ 2 ಒಂದಾಗುದೆ ನಿಜಗುರು ದಯಕರುಣ ವಂದಿಸಿ ನೋಡಬೇಕಿದೆ ಘನಸ್ಫುರಣ ಹೊಂದಿ ಬದುಕಿರೊ ಮಹಿಪತಿಗುರುಚರಣ ಚಂದವಿದೆ ಇಹಪರ ಭೂಷಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿಕ್ಕಬೇಕು ಗುರುಪಾದ ಸಿಕ್ಕಬೇಕು ಸಿಕ್ಕಿದ ಬಳಿಕಲಿ ದಕ್ಕಬೇಕು 1 ಮುಕ್ಕಬೇಕು ಗುರು ನಾ ಮುಕ್ಕಬೇಕು ಮುಕ್ಕಿದ ಬಳಿಕಲಿ ಅಕ್ಕಬೇಕು 2 ಉಕ್ಕಬೇಕು ಘನಸ್ಫುರಣ ಉಕ್ಕಬೇಕು ಉಕ್ಕಲು ಮಹಿಪತಿಗುಕ್ಕಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು