ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಸಕಲವೆನ್ನ ಸ್ವಾಮಿ ಶ್ರೀ ಹರಿಯೆ ದೀನ ದಯಾಳು ನೀನೆವೆ ನಿಜಧೊರಿಯೆ ಧ್ರುವ ತಂದೆ ತಾಯಿಯು ನೀನೆ ಬಂಧುಬಳಗ ನೀನೆ ಹೊಂದಿಕಿ ಹೊಲಬು ನೀ ಎನ್ನ ನೀನೆ ಎಂದೆಂದು ಸಲಹುವಾನಂದ ಮೂರುತಿ ನೀನೆ ಕುಂದ ನೋಡದಿಹ್ಯ ಮಂದರಧರ ನೀನೆ 1 ಕುಲದೈವವು ನೀನೆ ಮೂಲಪುರಷ ನೀನೆ ಒಲಿವ ಭಾಗ್ಯದ ಫಲಶ್ರುತಿಯು ನೀನೆ ಸಾಲವಳಿಯು ನೀನೆ ಹಲವು ಭೂಷಣ ನೀನೆ ಕುಲಕೋಟಿ ಬಳಗಾದ ಭಕ್ತವತ್ಸಲ ನೀನೆ 2 ಧನದ್ರವ್ಯಾರ್ಜಿತ ನೀನೆ ಘನಸೌಖ್ಯಾಕರ ನೀನೆ ಅನುದಿನಲಿಗನುಕೂಲ ನೀನೆ ದೀನ ಮಹಿಪತಿಸ್ವಾಮಿ ಭಾನುಕೋಟಿ ತೇಜನೆ ಮನೋಹರ ಮಾಡುವ ಮಹಾಮಹಿಮ ನೀನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ನಿಮ್ಮ ಮಹಿಮೆ ಅರಿಯರಾರಾರು ನರ ಮನುಜರ ಪಾಡೇ ಸುರಮುನಿಗಳೆ ನಿನ್ನರಸಿ ಕೊಂಡಾಡಲು ದೊರೆಯದಿರುವಿ ಘನ ಪರತರಮಹಿಮ ಪ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯುತ ಸೃಷ್ಟಿಗೊಳಿಸುತಿರುವಿ ಇಷ್ಟಭಕುತರ ಕಷ್ಟ ನಿವಾರಿಸಿ ಇಷ್ಟಪೂರೈಸುತಿರುವಿ ನಿಷ್ಠೆಯಿಂದ ಮನಮುಟ್ಟಿಭಜಿಪರನು ಬಿಟ್ಟಗಲದೆ ದೃಷ್ಟಿಯಿಂ ನೋಡುವಿ 1 ಲಾಷೆಯ ನೀಡುತಲಿ ಘಾಸಿ ಮಾಡದೆ ದೋಷರಾಶಿಯ ಕಳೆಯುತಲಿ ಪೋಷಿಸಿ ತ್ರಿಜಗದೀಶನೆ ಈ ಭವ ಪಾದವ ಖಂಡಿಸಿ ವಾಸುಕಿಶಯನ 2 ಮನಸಿಜಾರಿಯಂ ಘನಸಂಕಟದಿಂದ ಕನಿಕರದಿಂ ಕಾಯ್ದಿ ದನುಜಕುಲವನು ಹಣಿದು ಸುರರಿಗೆ ಘನಸೌಖ್ಯವನ್ನಿತ್ತಿ ತನುಮನ ಧನದಿಂ ನೆನೆಯುವ ಭಕುತರ ನೆನವಿಗೆ ಸಿಲುಕದಿ ಚಿನುಮಯ ರಾಮ 3
--------------
ರಾಮದಾಸರು