ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವಭಯಹರ ಸಿರಿಧವ ನರಹರಿ ಪೊರೆ ಭವಭವದಲಿ ನೀಡು ತವಪಾದ ಸೇವೆಯ ಪ ಮನುಮುನಿ ಘನಸುರ ವಿನಮಿತ ಸುಜನರ ಅನುಪಮ ಪ್ರಿಯಕರ ಜನಕಜೆ ಮನೋಹರ 1 ದುರಿತವಿನಾಶ ಪರಮಪ್ರಕಾಶ ಗಿರಿಧರ ಪರಾತ್ಪರ ಪರತರ ಲಕಮೀಶ 2 ಅಸುರಕುಲಾಂತಕ ವಸುಧೆಯುದ್ಧಾರಕ ಅಸಮ ಶ್ರೀರಾಮ ಮಹ ಮುಕ್ತಿಪ್ರದಾಯಕ 3
--------------
ರಾಮದಾಸರು
ಸವಿಲೀಲೆ ದೋರುತಿದೆ ಬಗೆಬಗೆನುಭವ ಬೀರುತಿದೆ ಧ್ರುವ ತುಂಬಿ ತುಳುಕ್ಯಾಡುತಿದೆ ಝಳಝಳನೆ ಥಳಗುಡುತಿದೆ ಬಲು ಸೂಸುತಿದೆ ಹೇಳಲಿನ್ನೇನದ ತಿಳಿಯಲಗಾಧವು ತನುಮನಕ್ಹರುಷಗಡುತಿದೆ 1 ಸುರಿಸುರಿದಾಡುವ ಸಾರಸವಿಯ ಸುಧಾರಸ ಭೋರ್ಗರೆಯುತಿದೆ ಇರುಳ್ಹಗಲೆನದ್ಯಾವಾಗನುದಿನ ಸದ್ಘನಸುರಿಮಳೆ ಧಾರಿಡುತಿದೆ ಪಾರಿಲ್ಲದ ಪರಾತ್ಪರ ದುರ್ಗಮಿದು ಪರಮಪಾವನ ಗೈಸುತಿದೆ ಪರಿಪರಿ ಸವಿದುಂಬುವ ಸುಜನರ ಸುಮುಖಕೆ ತಾನಿದಿರಿಡುತಿದೆ 2 ಪ್ರಭಕೆ ಪ್ರಭಾಕರವಾಗಿಹ ಭಾಸ್ಕರಕೋಟಿ ಪ್ರಕಾಶಿಸುತಿದೆ ಶುಭಕರವಾದ ಸದಾನು ಮಂಗಳ ನೆಲೆ ನಿಭವಾಗಿ ತೋರುತಿದೆ ಅಭಯಕರವ ಪಡೆದವಗೆನ್ನೊಡೆಯನ ಸುಖ ಸುಲಭಗುಡುತಿದೆ ಭಾಸುತಿದೆ ಗುರುಮಹಿಮೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು