ದೊರೆಯಾಗಿ ನಾನಿಹೆನಮ್ಮ ಅಜಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ
ಪರಿ ಪರಮಾನ್ನವಮ್ಮ 1
ಸಂಗರಹಿತ ಸತಿಯಮ್ಮ ಆಮಂಗಳವೆಂಬ ಘನಸುತರಮ್ಮಜಂಗಮವೇ ಜನವಮ್ಮ ಭೇದಂಗಳ ಪರಿದಿಹುದೇ ಅರಮನೆಯಮ್ಮ 2
ನಾದವೆಂಬುದ ವಾದ್ಯವಮ್ಮ ಸುನಾದವೆಂಬುದೇ ಗೀತಗಾಯಕರಮ್ಮಆದಿ ಬಂಧುವೇ ಮದವಮ್ಮ ತೇಜವಾದ ಚಿತ್ತವೇ ದೀವಟಿಗೆಮ್ಮ 3
ಜ್ಞಾನವೆಂಬುದೇ ಬಲವಮ್ಮ ಮಹದಾನಂದ ರಾಜ್ಯಕ್ಕೆ ಅಧಿಪತಿಯಮ್ಮತಾನೆ ಎಂಬುದೇ ಮುದ್ರೆಯಮ್ಮ ಇಂತುನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ4
ಸುರವರರ್ಗಿನಿತುಂಟೆ ಅಮ್ಮಹಿರಿಯಾರಾರಾದರೇನು ದೊರಕದಮ್ಮಗುರುವಿನ ದಯದಿಂದಲಮ್ಮ ನಿಜಗುರು ಚಿದಾನಂದನೇ ತಾನಾದುದಮ್ಮ5