ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ಧ್ರುವ ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋಭಕ್ತರ ವಿಘ್ನಹರ 1 ನಿಮ್ಮ ಭೋಧಗುಣವೆ ಸರಸ್ವತಿ ಸಮ್ಯಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದ ದೋರುವ ಫಲಶ್ರುತಿ 2 ಬೇಡಿಕೊಂಬೆ ನಿಮಗೆ ಅನುದಿನ ಕುಡುವವರಿಗೆ ನೀ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹ ನಿತ್ಯವು ನಾ ನಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯದೇವ ಜಯದೇವ ಜಯ ವಾಸುದೇವ ಭಾಸುವ ಭಾಸ್ಕರಕೋಟಿತೇಜನ ಮನದೈವ ಧ್ರುವ ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ 1 ಸುಗುಣ ನಿರ್ಗುಣ ನೀನೆ ಪರಿಪೂರ್ಣ ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ 2 ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ ಸನಕ ಸನಂದನ ವಂದಿತ ನೀನೆ ಅನುದಿನ ಘನಸುಖದಾಯಕ ಸದ್ಗುರು ನೀ ನಿಧಾನ ದೀನ ಮಹಿಪತಿ ಸ್ವಾಮಿ ನೀ ಸನಾತನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದೊ ಶ್ರೀಹರಿ ಕಾವಕರುಣ ನೀನೆ ಮುರಾರಿ ಧ್ರುವ ಕಮಲಭವಾರ್ಜಿತ ಕಾರುಣ್ಯ ಶೀಲ ವಿಮಲ ವಿರಾಜಿತ ಮದನಗೋಪಾಲ 1 ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣ ರಕ್ಷಕ 2 ಅಗಣಿತ ಮಹಿಮ ಅವರುಜ ನೇತ್ರ ನೀನಹುದೊ ನಿಸ್ಸೀಮ 3 ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸು ಜನ ಸಹಕಾರ 4 ಭಾನುಕೋಟಿತೇಜ ನೀನೆ ಸುಹೃದಯ ದೀನದಯಾಳು ನೀನಹುದೊ ಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿದವರ ಕಾವ ದೈವ ಅಂಬುಜಾಕ್ಷನೀತನೆಂದು ಧ್ರುವ ನಂಬಿದ ಪ್ರಲ್ಹಾದಗ ತಾಂ ಸ್ತಂಭದೊಳು ಮೂಡಿ ಬಂದು ಹಂಬಲಿಸಿ ದಲ್ಲ್ಯೊದಗಿ ಇಂಬವಾದನೀತನೆಂದು 1 ನಾಮ ನಂಬಬಾರದೆ ನೀ ಕಾಮಧೇನುವೆಂದು ಪೂರ್ಣ ನೇಮದಿಂದ ಸಲಹುತಿಹ್ಯ ಸ್ವಾಮಿ ಸರ್ವೋತ್ತಮನೆಂದು 2 ದೀನ ಮಹಿಪತಿಸ್ವಾಮಿ ಭಾನುಕೋಟಿತೇಜಪೂರ್ಣ ಮನದಪೇಕ್ಷೆ ಪೂರೈಸುವ ಘನಸುಖದಾಯಕನೆಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಯಾಸದಿಂದ ಸಾಧಿಸಬೇಕು ಸತ್ಸಂಗ ಮಾಯಿಕಬುದ್ಧಿ ಬಿಟ್ಟು ನೋಡಿ ಅಂತರಂಗ ಧ್ರುವ ಆಯಿತವಾಗಿ ತೋರುತಾನೆ ಶ್ರೀರಂಗ ಸಾಯದಲ್ಯಾಗುತದೆ ನೋಡಿ ಭವಭಂಗ 1 ಹಿಡಿದರೆ ಹಿಡಿಯಬೇಕೊಂದೆ ಸಾಧು ಸಹವಾಸ ಪಡೆದರೆ ಪಡೆಯಬೇಕೊಂದೆ ತಾ ನಿಜಧ್ಯಾಸ ನಡಿನುಡಿ ಒಂದೆ ಆಗುವುದೆ ಅಪ್ರಯಾಸ ತಡಿಯದೆ ಮಾಡಬೇಕೊಂದೆ ನಿಜಾಭ್ಯಾಸ 2 ಅನೇಕ ಪುಣ್ಯ ಒದಗಿತು ಸತ್ಸಂಗದಾಗ ದಿನಕರಕೋಟಿ ಹೊಳೆವುದು ಮನದೊಳಗೆ ಬ್ಯಾಗ ತನುಮನವಿಟ್ಟು ಕೇಳಿ ಗುರುಪಾದಕೀಗ ಘನಸುಖದಾಯಕ ಮಹಿಪತಿಯ ಸದ್ಗುರುವಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು