ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ ಪ ಯೋಗಿ ಮಧ್ವಮತದಾಗಮದಿಂದಲಿ ಭಾಗವತರು ಶಿರಬಾಗಿ ಪಾಡುವರೋ ಅ.ಪ ಕುಂದಣಮಣಿಮಯ ಸ್ಯಂದನದೊಳತಿ ಸುಂದರ ಶುಭತರ ರೂಪ - ದಿಂದಲಿ ರಾಜಿಪಾಮಂದಭೋಧ ನಿಜ ನಂದದಾಯಕ ಯತಿಕುಲ ದೀಪ ಛಂದದಿ ಭಕುತ(ರ) ಕುಂದನಿಚಯಕೆ ನಿಜ ಚಂದಿರ ಸಮ ಭೂಪಾ - ಪಾದ ದ್ವಂದ್ವವು ನಿಜರಿಗೆ ನಂದ ನೀಡುವ ಪ್ರತಾಪಾ ವಂದಿಸಿ ಗುಣಗಳ ವೃಂದ ಪೊಗಳುವ ಮಂದ - ಜನರು ಬಲು - ಸುಂದರ ಶುಭಗುಣ ದಿಂದ ಶೋಭಿಪÀ ಜನ - ಸಂದಣಿಯೊಳು ನಿನ್ನ ಸುಂದರ ಮೂರುತಿ - ಛಂದದಿ ನೋಳ್ಪರೊ 1 ಕನಕ ಮಣಿಮಯ ಘನಸುಕೊಡೆಗಳು ಮಿನುಗುವ ಚಾಮರ ಚೋದ್ಯವೋ ಅನುಗ - ಕರಗತ ಮಣಿಮಯ ಛಡಿಗಳ ಅನುಪಮ ಭಾರವೋ ಮುನಿಜನ ಶಿರಮಣಿಸಿ ಗುಣ ಗಣ ಎಣಿಸುವ ಗಂಭೀರವೋ ತನು - ಮನ - ಮನಿ - ಧನ ವನುತೆರ ನಿನಗನು - ಮಾನಮಾಡದೆ ನೀಡುವಗಾಧವೋ ಘನ ಸಂತೋಷದಿ - ಮನದೊಳು ನಲಿಯುತ ಕುಣಿದಾಡುತ - ದಣಿಯದೆ ಕರಚಪ್ಪಳಿ | ಕ್ಷಣ ಕ್ಷಣದಲಿ ತ್ಮಮ - ತನು ಮರೆದೀಪರಿ ಜನರೊಳು ನಮ್ಮ ಜನುಮ ಸಫಲವೆಂಬುವರೋ 2 ಪಟುತರ ಭಟರಾರ್ಭಟಿಸುವ ಮಹ ಚಟ - ಚಟ - ಚಾಟ ಶಬ್ಧವೋ ಕುಟಿಲ ವಿಮತ ಘನ ಪಟಲ ವಿದಾರಣ ಚಟುಲ ಸ್ವಮತ ಸಿದ್ಧಾಂತವೋ ಕುಟಿಲಾಳಕಿಯರ ಕುಣಿಯುವ ಪದದಿ ಸಂ - ಘಟಿತ ಗೆಜ್ಜೆಗಳ ಶಬ್ಧವೋ ಪಟು ಗುರುಜಗನ್ನಾಥವಿಠಲರ ದಾಸರ ಧಿಟ ಪದ ಸಂಗೀತವೋ ಧಿಟಗುರುರಾಯನೆ - ಭಟರುಗಳ ಮಹÀಸು - ಕಟಕದಿ ಮೋದೋ - ತ್ಕಟದಲಿ ಇಷ್ಟವ ಥಟನೆ ಬೀರುತ ಬಲು ಪುಟಿದಾಡುತ ಹರಿ ಭಟ ಜಲಜೋತ್ಕಟ ದಿವಾಕರ 3
--------------
ಗುರುಜಗನ್ನಾಥದಾಸರು