ಮಗುಟ ವಿಶ್ವದೊಳೊಬ್ಬನೆ ಪ್ರಗಟ
ಭಾಸ್ಕರ ಗುರು ದಯನೋಟ ರಸಕಾಯ ಸವಿದುಂಬೂಟ ಧ್ರುವ
ಭಾಸ್ಕರ ಗುರು ನಿಜದಯ ಲೇಸುದೋರುವ ವಿಜಯ
ಭಾಸ್ಕರ ಗುರು ಅಭಯ ಹಸನಾದ ಪುಣ್ಯೋದಯ 1
ಭಾಸ್ಕರ ಕರುಣಾಕಟಾಕ್ಷ ಭಾಸುದು ಘನಪ್ರತ್ಯಕ್ಷ
ಭಾಸ್ಕರ ಗುರು ನಿಜ ಭಿಕ್ಷ ಹಸನಾಗಿ ಮಾಡುವಾ ಸಂರಕ್ಷ 2
ಭಾಸ್ಕರ ಗುರು ನಿಜಬೋಧ ಭಾಸುವ ಘನಸರ್ವದಾ
ಭಾಸ್ಕರ ಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ(?) 3
ಭಾಸ್ಕರ ಗುರು ಉಪದೇಶ ಭಾಸಲು ಬಲು ಸಂತೋಷ
ಭಾಸ್ಕರ ಗುರುವರೇಶ ಈಶನಹುದೊ ಸರ್ವೇಶ 4
ಭಾಸ್ಕರ ಗುರುಕೃಪೆ ಙÁ್ಞನ ಲೇಸಾಗಿ ತೋರುವದುನ್ಮನ
ಭಾಸ್ಕರ ಗುರುದಯ ಕರುಣ ದಾಸ ಮಹಿಪತಿಗಾಭರಣ5