ಜಾಗರ ಮಾಡಿದೆನೇ ಪ
ಜಾಗರ ಮಾಡಿದೆ ಸಾಗರನಿಲಯನ
ನೀಗದಮಹಿಮೆ ಶಿವ ಯೋಗದಿ ತಿಳಿಸೆಂದು ಅ.ಪ
ಲಕ್ಷಪತ್ರರ್ಪಿಸಿ ತ್ರಿಜಗದ್ರಕ್ಷ ನಿನಗೆ ನಮಿಸಿ
ಲಕ್ಷದಿಂದ ಸತಿಗಕ್ಷಯವಿತ್ತ ಭಕ್ತ
ಪಕ್ಷನ ನಾಮ ಎನ್ನ ಕುಕ್ಷಿಗೆ ನೀಡೆಂದು 1
ಮನವನು ಮಡಿಮಾಡಿ ಹರಹರ ನಿನಗೆ ನಾ ಎಡೆಮಾಡಿ
ಮನಸಿಜಜನಕನ ಘನಸಚ್ಚರಿತೆಯನ್ನು
ಕೊನೆಯ ನಾಲಗೆ ಮೇಲೆ ನೆನವು ಸ್ಥಾಪಿಸೆಂದು 2
ಪ್ರೇಮ ದೃಷ್ಟಿ ತೆರೆದು ಶಂಭು ಎನ್ನ ಕಾಮಿತಗಳ ಕಡಿದು
ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ
ಕೋಮಲ ಪಾದವೆನ್ನ ಮಂಡೆಮೇಲ್ಹೊರಿಸೆಂದು 3