ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ನಿಮ್ಮ ಮಹಿಮೆ ಅರಿಯರಾರಾರು ನರ ಮನುಜರ ಪಾಡೇ ಸುರಮುನಿಗಳೆ ನಿನ್ನರಸಿ ಕೊಂಡಾಡಲು ದೊರೆಯದಿರುವಿ ಘನ ಪರತರಮಹಿಮ ಪ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯುತ ಸೃಷ್ಟಿಗೊಳಿಸುತಿರುವಿ ಇಷ್ಟಭಕುತರ ಕಷ್ಟ ನಿವಾರಿಸಿ ಇಷ್ಟಪೂರೈಸುತಿರುವಿ ನಿಷ್ಠೆಯಿಂದ ಮನಮುಟ್ಟಿಭಜಿಪರನು ಬಿಟ್ಟಗಲದೆ ದೃಷ್ಟಿಯಿಂ ನೋಡುವಿ 1 ಲಾಷೆಯ ನೀಡುತಲಿ ಘಾಸಿ ಮಾಡದೆ ದೋಷರಾಶಿಯ ಕಳೆಯುತಲಿ ಪೋಷಿಸಿ ತ್ರಿಜಗದೀಶನೆ ಈ ಭವ ಪಾದವ ಖಂಡಿಸಿ ವಾಸುಕಿಶಯನ 2 ಮನಸಿಜಾರಿಯಂ ಘನಸಂಕಟದಿಂದ ಕನಿಕರದಿಂ ಕಾಯ್ದಿ ದನುಜಕುಲವನು ಹಣಿದು ಸುರರಿಗೆ ಘನಸೌಖ್ಯವನ್ನಿತ್ತಿ ತನುಮನ ಧನದಿಂ ನೆನೆಯುವ ಭಕುತರ ನೆನವಿಗೆ ಸಿಲುಕದಿ ಚಿನುಮಯ ರಾಮ 3
--------------
ರಾಮದಾಸರು