ಹನುಮ ಮಧ್ವಾಧಿಪತೇ ನಮೋ ನಮೋ ಪ
ಹನುಮ ಮಧ್ವಾಧಿಪತೇ ಘನಶ್ರೇ
ಷ್ಠನುಪಮಮುನಿವರನೆನಿಸಿದ ಅ.ಪ
ಉದ್ಧರಿಸೆಂದು ಮರೆಬಿದ್ದ ಭಕ್ತನಂ
ಮುದ್ದಿಟ್ಟೆತ್ತೆ ನಿರ್ಧಾರದಭಯವಿತ್ತು
ಪದ್ಮನಾಭ ನಿಂದುದ್ಧರಿಸಿದಿ ಪರಿ
ಶುದ್ಧಮೂರುತಿ ಪ್ರಸಿದ್ಧನೆನಿಸಿದಂಥ 1
ಶಕ್ತಿಯಿತ್ತ ಮಹ ಮೌಕ್ತಿಕ ಮಾಲೆಯ
ಸುತ್ತಿ ಶಿಲೆಯ ಮೇಲೆತ್ತಿ ಹೊಡೆದು ಘನ
ಭಕ್ತಿತೋರಿ ಹರಿಚಿತ್ತ ತೃಪ್ತಿಬಡಿಸ
ತ್ಯುತ್ತಮ ನಿಜಭೃತ್ಯನೆನಿಸಿದಂಥ 2
ಸುದತಿ ಸೀತೆ ತನ್ನ ಸದಯನ ನೆನೆಯಲು
ಎದೆಸೀಳಿ ತೋರಿಸಿ ಸದಮಲನಂಘ್ರಿಯ
ಸದಮಲಾಂಗಿ ವ್ರತ ಮುದದಿ ತೀರಿಸಿ ನಿಜ
ಸದಮಲ ಭಕ್ತ ನೀನಹುದುಹುದೆನಿಸಿದ 3
ಶ್ರೀಕರನಪ್ಪಣೆ ಪಡೆದು ಅಸಮಬಲ
ದೇಕ ಕಾಲದ್ಹಾರಿ ಹುಡುಕಿ ಕಾಶಿಯಿಂ
ಏಕಾಗ್ರಚಿತ್ತದಿ ತಂದು ಲಿಂಗ ಮೂ
ಲೋಕ ಮೋಹನನಿಂ ಲೋಕಪೂಜ್ಯೆನಿಸಿದ 4
ಮೀರಿದ ಗರುಡನಪಾರ ಗರುವಮಂ
ಸೂರಗೈದು ದ್ವಾಪರ ಯುಗದಿಅ
ಪಾರ ಮಹಿಮ ಶ್ರೀ ಧೀರ ಶ್ರೀರಾಮನ
ಚಾರುಚರಣ ಕಂಡು ನಿರುತನೆನಿಸಿದಂಥ 5