ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣದೆ ಸುಳ್ಳೆ ಬಡಿದಾಡ್ವಿರ್ಯಾಕಣ್ಣ ನಾನ್ಹೋಗತನ ನಿಮಗೆ ಮುಕ್ತಿಯಿಲ್ಲಣ್ಣ ಪ ಪ್ರಾಚೀನ ಹಿರಿಯರ ಸಾಕ್ಷಿಕೊಡುವೆ ನಿಮಗೆ ಜ್ಞಾನದಿಂ ಕೇಳಿ ತಿಳೀಬಹುದಣ್ಣ ಅ.ಪ ಘನವಂತ ಸತ್ಯವ್ರತ ಭೃಗು ಗಾರ್ಗೆಯರು ಇನಿಸುತಿಳಿಯದೆ ವಿಶ್ವಾಮಿತ್ರನು ಘನಶ್ರಮಬಟ್ಟರು ಮುನಿ ವರದನಾರದರು ದಿನದಿನ ತ್ರಿಣಿಯರು ದರ್ಶನಿದ್ದವರು ಜನಕ ರಾಜರ್ಷಿಯು ಮುನಿ ಅತ್ರಿಮಹಿಮರು ನಾನ್ಹೋಗತನ ಮುಕ್ತಿ ಸಿಗದೆ ಬಳಲಿದರು 1 ಸನಕಾದಿ ಸಾನಂದ ಮಹರ್ಷಿಗಳು ಮುನಿಶ್ರೇಷ್ಠ ಬಲ್ಲಿದ ವಾಲ್ಮೀಕಾದಿಗಳು ಶೌನಕಶುಕಭರದ್ವಾಜಮುನಿಗಳು ಗಣನೆಯಿಲ್ಲದ ಮಿಕ್ಕ ಪತಿತಮೋಕ್ಷಿಗಳು ಪುರಂದರ ಜ್ಞಾನಿಗಳಿವರ್ಗೆಲ್ಲ ನಾನ್ಹೋಗತನ ಮುಕ್ತಿ ಆಗಿಲ್ಲ ಕೇಳೋ 2 ನಾನ್ಹೋಗದದಕಜ ಕಳಕೊಂಡ ಶಿರವ ನಾನು ಹೋಗಿದ್ದರೆ ಅಳಿತಿದ್ದಿಲ್ಲೆಲವೋ ಖೂನವಿಲ್ಲದೆ ಕೂಗಿ ಕೆಡಬೇಡಿ ನೀವು ಭವ ಹೊಂದಿರಿ ಗೆಲವು ನಾನ್ಹೋದಮೇಲೆ ಜಾನಕಿ ಶ್ರೀರಾಮ ಮಾಣದೆ ಕೊಡುವನು ಮುಕ್ತಿ ಸಂಪದವ 3
--------------
ರಾಮದಾಸರು