ಮಂಗಳಂ ರಘುರಾಮಗೆ ಜಯಮಂಗಳಂ ಗುಣಧಾಮಗೆ
ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ.
ರಾಮಗೆ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೆ
ಕಾಮಿತಾರ್ಥಪ್ರದಾತಗೆ ವರರಾಮಣೀಯಕ ರೂಪಗೆ 1
ಶ್ರೀಶಗೆ ಜಗದೀಶಗೆ ಭಯನಾಶಗೆ ಸರ್ವೇಶಗೆ
ದಾಸಜನಮನೋಲ್ಲಾಸ ಲಕ್ಷ್ಮೀಶಕೇಶವ ಮೂರ್ತಿಗೆ 2
ಮಾರುತಾತ್ಮಜಪÀರಿಸೇವ್ಯಗೆ ನತಪಾರಿಜಾತ ಸಮಾನಗೆ
ವಾರಿಜಾಯತನೇತ್ರ ಶ್ರೀಶೇಷಶೈಲ ನಿವಾಸಗೆ 3