ಭಕ್ತ ಮಂದಾರಿಣಿ ಭವಭಯನಿವಾರಿಣಿ
ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ.
ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ
ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ.
ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ
ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ 1
ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ
ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ 2
ಕಮಲ ಬಾಂಧವ ವಂಶ ಸಂಭವ
ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ 3
ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ
ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ 4
ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ
ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ5