ಜಯಮಂಗಳಂ ವೈಕುಂಠನಿಲಯಗೆ ಪ.
ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ
ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ
ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ 1
ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ
ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ
ಗೋಪಾಲಕನಂದನ ಯದುಪತಿಗೇ 2
ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ
ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ
ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ3