ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಸಲಹೋ ನೀ ದಯಾಂಬುಧಿ| ಘನಶಾಮಾ ರಾಮಾ ಪ ವಸುದಿಜ ಲೋಲ ಸುರಮುನಿ ಪಾಲಾ| ದಶರಥ ತನಯ ಕೃಪಾಲ1 ದುರಿತ ನಿವಾರಾ| ದಾನವಕುಲ ಸಂಹಾರಾ 2 ಸರಸಿಜನಯನಾ ಸದ್ಗುಣ ಸದಾನೆ ಗುರು ಮಹಿಪತಿ ಸುತ ಜೀವನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ | ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ ಬೋಧ ಸುರ್ಯನು ಬರಲಿ | ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ 1 ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ | ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ 2 ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ | ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ 3 ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ | ಜಾಂಬವ ಹನುಮಾ4 ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು | ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯರಘುರಾಮಾ | ಸದ್ಗುಣ ಧಾಮಾ | ದಯದಾಗರ ಘನಶಾಮಾ ಪ ಜಯರಘರುರಾಮಾ | ಸದ್ಗುಣ ಧಾಮಾ ದಯದಾಗರ ಘನ ಶಾಮಾ | ಭಯಹರನೇಮಾ ರಣನಿಸ್ಸೀಮಾ | ತ್ರಯಂಬಕ ವಿಶ್ರಾಮಾ | ಪ್ರಿಯಕರ ನಾಮಾ ಪೂರಿತ ಕಾಮಾ | ಶ್ರಯಸುದಾಯಕ ಮಹಿಮಾ 1 ಸುರಸಹಕಾರ ಇನಕುಲೋದ್ದಾರಾ | ಧರಣೀಸುತೆ ಮನೋಹಾರಾ | ಶರಯುತೀರಾಯೋಧ್ಯ ವಿಹಾರಾ | ಚರಿತಪಾರಾ ವಾರಾ | ಪರಮೋದಾರಾ ಸರ್ವಾಧಾರಾ | ದುರತಾವಳಿವಿದಾರಾ 2 ವನರುಹಾಸನ ವಂದಿತಚರಣಾ | ಜನನಿ ಕೌಶಲ್ಯಾ ನಿಧಾನಾ | ಅಣುರೇಣು ಜೀವನಾ ವ್ಯಾಪಕಪೂರ್ಣ | ಕನಕಾಂಬರ ಭೂಷಣ | ಮುನಿಜನ ರಂಜನಾ ದೈತ್ಯವಿಭಂಜನಾ | ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು