ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ
ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ
ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ;
ವಿದ್ಯುಲ್ಲತಿಯೋ
ಭೂಷಣವೋ ; ತಾರಾಗಣವೋ 1
ಶ್ರೀ ಮಹಾದೇವನ ನಂಜು ಗೊರಳಠವಠವಿಯೋ :
ಮೇಘ ಚ್ಛವಿಯೋ
ತರಣಿಯ ಸದನೋ
ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ;
ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ:
ಹವಳದ ಕುಡಿಯೋ 2
ಕರ ಡಮರದ ನಾದಸ್ಪರಣೋ :
ಘನವ್ಯಾಕರಣೋ:
ಕರ್ಪುರ ಗಿರಿಯೋ;
ಸುರಕುಜ ಪರಿಯೋ:
ಗುರವರ ಮಹಿಪತಿ ನಂದನ ತಾರಕ ಶಿವನೋ:
ನಿಜ ಬಾಂಧವನೋ 3