ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ
ಬಾರೋ ನಲಿದಾಡೋ ಜಿಹ್ವೆಯಲಿ ಪ
ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ
ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು
ಮಾಡೋ ಕರುಣಾರ್ಣವದಿ
ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1
ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ
ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ
ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ
ನಾಯಿಂದೂ ದ್ವಂದ್ವಾಪದವಿಡಿದಿದೆ 2
ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು
ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು
ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ
ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3